ಪುತ್ತೂರು: ಪುತ್ತೂರು ಅರಣ್ಯ ಅಧಿಕಾರಿಗಳು ನ್ಯಾಯಾಲಯದ ತೀರ್ಪು ಓದುವ ವೇಳೆ ಎಡವಟ್ಟು ಮಾಡಿ ನನ್ನನ್ನೂ ಉದ್ಯೋಗದಿಂದ ಅಮಾನತು ಮಾಡಿದ್ದಾರೆ. ನ್ಯಾಯ ಕೊಡಬೇಕಾದ ಅಧಿಕಾರಿಗಳೇ ಅನ್ಯಾಯ ಮಾಡಿದ್ದಾರೆಂದು ಪುತ್ತೂರಿನ ಉಪ ವಲಯ ಅರಣ್ಯಾಧಿಕಾರಿ ಸಂಜೀವ ಪೂಜಾರಿ ಆರೋಪಿಸಿದ್ದಾರೆ.
ಪುತ್ತೂರು ಅರಣ್ಯ ವಲಯದ ಕೊಯಿಲ ಶಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನನ್ನ ವಿರುದ್ಧ ವೃಥಾ ಸುಳ್ಳು ಆರೋಪ ಹೊರಿಸಿ ಜನವರಿ 13 2023 ರಂದು ಮಂಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಅಮಾನತು ಆದೇಶ ಹೊರಡಿಸಿರುತ್ತಾರೆ. ಇದನ್ನು ಪ್ರಶ್ನಿಸಿ ಕರ್ನಾಟಕ ಆಡಳಿತ ನ್ಯಾಯಾಧಿಕರಣ ಮಂಡಳಿಗೆ ಮೇಲ್ಮನವಿ ಸಲ್ಲಿಸಿರುತ್ತೇನೆ. ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ನನ್ನದು ಯಾವುದೇ ತಪ್ಪಿಲ್ಲ ಎಂಬ ತೀರ್ಪು ನೀಡಿರುತ್ತದೆ ಎಂದು ಅವರು ಹೇಳಿದರು.
ಪುತ್ತೂರು ವಲಯ ಆರಣ್ಯಾಧಿಕಾರಿ ,ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಮಂಗಳೂರು ವೃತ್ತ) ಈ ಅಮಾನತು ಆದೇಶದ ಹಿಂದಿದ್ದಾರೆ ಎಂದು ಅವರ ಆರೋಪಿಸಿದ್ದಾರೆ. ನ್ಯಾಯಾಲಯದ ಆದೇಶವನ್ನು ಓದಿ,ಅದನ್ನು ಅರ್ಥೈಸಿಕೊಳ್ಳಲು ಬಾರದ ವ್ಯಕ್ತಿಯೊ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾದರೇ ಅವರ ಮಟ್ಟದ ನ್ಯಾಯವನ್ನು ನಿರೀಕ್ಷಿಸಬಹುದು ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೇ, ಈ ಪ್ರಕರಣದಲ್ಲಿ ಸಂಜೀವ ಪೂಜಾರಿಯ ತಪ್ಪುಗಳಿದ್ದಲ್ಲಿ ತನಿಖಾಧಿಕಾರಿಯನ್ನು ನೇಮಿಸಿ, 6 ತಿಂಗಳ ಒಳಗಡೆ ವಿಚಾರಣೆ ನಡೆಸಿ ನ್ಯಾಯಾಲಯ ವರದಿ ನೀಡುವಂತೆ ಸೂಚಿಸಿತ್ತು. ಆದರೇ ತೀರ್ಪು ಪ್ರಕಟವಾಗಿ ಒಂದೂವರೆ ತಿಂಗಳು ಕಳೆಯುವುದೊರಳಗಡೆ ಜನವರಿ ತಿಂಗಳ ಆದೇಶ ಪ್ರತಿಯನ್ನು ಮುಂದಿಟ್ಟು ಪುನ: ಸಸ್ಪೆಂಡ್ ಮಾಡಿದ್ದಾರೆ. ಈ ಕುರಿತು ನಾನು ಮುಖ್ಯ ಸಂರಕ್ಷಣಾಧಿಕಾರಿಯವರನ್ನು ಪ್ರಶ್ನಿಸಿದ್ದು, ಈ ವೇಳೆ ಆದೇಶ ಪ್ರತಿಯ ಕೆಳಗಡೆ “ಡಿಸ್ಮಿಸ್ ” ಎಂದು ಬರೆದಿರುವುದನ್ನು ಓದಿ, ಉಳಿದ ಆದೇಶ ಪತ್ರವನ್ನು ಸರಿಯಾಗಿ ಓದದೇ ಅಮಾನತು ಆದೇಶ ಹೊರಡಿಸಿರುವುದಾಗಿ ಹೇಳಿದ್ದಾರೆ.