ಪುತ್ತೂರು : ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾಮಟ್ಟದ ಖೋ ಖೋ ಸ್ಪರ್ಧೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಪ್ರಥಮ ಸ್ಥಾನ ಪಡೆದು ಆಗಸ್ಟ್ 12 ಹಾಗೂ 13 ರಂದು ಬೆಂಗಳೂರಿನ ಬೊಮ್ಮಸಂದ್ರ ಶ್ರೀ ಸರಸ್ವತಿ ವಿದ್ಯಾನಿಕೇತನದಲ್ಲಿ ನಡೆಯುವ ರಾಜ್ಯ ಮಟ್ಟ ಮಟ್ಟದ ಖೋ ಖೋ ಸ್ಪರ್ಧೆಗೆ ಆಯ್ಕೆಯಾಗಿದೆ.
ತಂಡವನ್ನು ವಿದ್ಯಾರ್ಥಿಗಳಾದ ಅಶ್ವಿತ್ ಭಂಡಾರಿ, ಪಿ. ಎಸ್. ವರುಣ್ ಕುಮಾರ್, ಧನುಷ್ ,ಜೀವನ್ ಎಸ್, ಮನ್ವಿತ್ ಬಿ ಗೌಡ, ದೇಶಿಕ್ ಕೆ, ಶ್ರೇಯಸ್ ಪಿ, ರಂಜನ್ ಕೆ.ಆರ್, ಸುಹಾಸ್ ಕೆ, ಸ್ವಸ್ತಿಕ್ ಎನ್, ಬಿ ಗುರುಕಿರಣ್ , ಮೋಕ್ಷಿತ್ ಡಿ ಆರ್, ಜಿಷ್ಣು ಪ್ರಕಾಶ್ ಪ್ರತಿನಿಧಿಸಿದ್ದರು.
ವಿದ್ಯಾಭಾರತಿ ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ಖೋ ಖೋ ಸ್ಪರ್ಧೆಯಲ್ಲಿ ಕಾಲೇಜಿನ ತಂಡವು ದ್ವಿತೀಯ ಸ್ಥಾನ ಪಡೆದಿದೆ. ತಂಡವನ್ನು ವಿದ್ಯಾರ್ಥಿಗಳಾದ ಶಿವಾನಿ ಪಿ ಕೆ,ದಿಶಾ ವಿ, ಪ್ರಕೃತಿ ಬಿ ಯು, ಸೋನಿಕಾ ಟಿ.ಎಸ್, ಕೃತಿಕಾ ಎಚ್ ಎಸ್, ಮನ್ಯ, ಸೃಷ್ಟಿ ಎಸ್ ಆರ್, ಬಿಂದುಶ್ರೀ ಡಿ ಡಿ, ಪ್ರಜ್ಞಾ ವಿ ಬಿ, ಮೇಘಶ್ರೀ ಕೆ.ಸಿ, ಪುಣ್ಯಶ್ರೀ ಎಸ್, ನಿಶಾ ಬಿ ಎಂ ಪ್ರತಿನಿಧಿಸಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ. ಜ್ಯೋತಿ ,ಯತೀಶ್ ಬಾರ್ತಿಕುಮೆರ್ ಹಾಗೂ ಕಾರ್ತಿಕ್ ಎನ್ ಅವರ ಮಾರ್ಗದರ್ಶನದಲ್ಲಿ ತಂಡ ತರಬೇತಿ ಪಡೆದಿರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಧ್ಯಾಪಕ ಮತ್ತು ಅಧ್ಯಾಪಕೇತರ ವೃಂದ ಅಭಿನಂದಿಸಿದ್ದಾರೆ.