ಸ್ಪಂದನಾ ಅವರ ಪಾರ್ಥೀವ ಶರೀರ ಬೆಂಗಳೂರಿಗೆ | ಇಂದು ಹರಿಶ್ಚಂದ್ರಘಾಟ್ ನಲ್ಲಿ ಅಂತ್ಯಸಂಸ್ಕಾರ

ಬೆಂಗಳೂರು: ಬ್ಯಾಂಕಾಕ್‌ನಲ್ಲಿ ಅಕಾಲಿಕ ಮರಣಕ್ಕೀಡಾದ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಂತ್ಯಸಂಸ್ಕಾರ ಇಂದು (ಬುಧವಾರ) ಅಪರಾಹ್ನ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಹರಿಶ್ಚಂದ್ರಘಾಟ್‌ನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಪೂರ್ವಾಹ್ನ ಮಲ್ಲೇಶ್ವರಂನಲ್ಲಿರುವ ಸ್ಪಂದನಾ ತಂದೆ ನಿವೃತ್ತ ಐಪಿಎಸ್‌ ಅಧಿಕಾರಿ ಬಿ.ಕೆ. ಶಿವರಾಮ್‌ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ.

ಮಂಗಳವಾರ ರಾತ್ರಿಯೇ ಪ್ರಕ್ರಿಯೆಗಳನ್ನೆಲ್ಲಾ ಪೂರೈಸಿ ಥಾಯ್ಲೆಂಡ್‌ ಏರ್‌ಲೈನ್ಸ್‌ನ ವಿಶೇಷ ವಿಮಾನದ ಮೂಲಕ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ತರಲಾಗಿದೆ. ಥಾಯ್ಲೆಂಡ್‌ನಲ್ಲಿದ್ದ ವಿಜಯ ರಾಘವೇಂದ್ರ, ಬಿ.ಕೆ. ಶಿವರಾಮ್‌ ಹಾಗೂ ಸೋದರ ರಕ್ಷಿತ್‌ ಶಿವರಾಮ್‌ ಆಗಮನದ ಬಳಿಕ ಮುಂದೆ ನಡೆಸಬೇಕಾದ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗಿದೆ.



































 
 

ಮಂಗಳವಾರ ರಾತ್ರಿಯಿಂದಲೇ ವಿಜಯ ರಾಘವೇಂದ್ರ ಹಾಗೂ ಶಿವರಾಮ್‌ ಕುಟುಂಬದ ಸದಸ್ಯರು, ಸ್ನೇಹಿತರು, ಆಪ್ತರು, ಗಣ್ಯರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸುತ್ತಿದ್ದಾರೆ. ಬುಧವಾರ ಸಾರ್ವಜನಿಕ ದರ್ಶನ ಮುಗಿದ ಬಳಿಕ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ನಡೆಯಲಿದೆ.

ವಿಜಯ್‌ ಪತ್ನಿ ಸ್ಪಂದನಾ ಅವರು ಮೂರು ದಿನಗಳ ಹಿಂದೆ ಬ್ಯಾಂಕಾಕ್‌ ಪ್ರವಾಸಕ್ಕೆ ತೆರಳಿದ್ದು. ಅಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ. ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ವಿಜಯ್, ಚಲನಚಿತ್ರ ನಿರ್ಮಾಪಕ ಚಿನ್ನೆಗೌಡರ ಹಿರಿಯ ಸೊಸೆ. ಈಗ ಇವರ ಹಠಾತ್ ನಿಧನದಿಂದ ಎರಡೂ ಕುಂಟುಂಬಗಳು ಕಂಗೆಟ್ಟು ಹೋಗಿದೆ. ವಿಜಯ ರಾಘವೇಂದ್ರ ಮತ್ತು ಸ್ಪಂದನಾ ಅವರದ್ದು ಮುದ್ದಾದ ಜೋಡಿ. ಇಡೀ ಚಿತ್ರರಂಗ ಮಾತ್ರವಲ್ಲ ಅವರ ಅಭಿಮಾನಿಗಳಿಗೆ ಕೂಡ ಈ ಸುದ್ದಿ ಶಾಕ್ ತಂದಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top