ರೋಟರಿ ಜಿಲ್ಲೆ 3181 ರ ಪ್ರಥಮ WASH Group ರಾಯಭಾರಿಯಾಗಿ ಡಾ.ರಾಜೇಶ್ ಬೆಜ್ಜಂಗಳ

ಪುತ್ತೂರು: ಅಂತಾರಾಷ್ಟ್ರೀಯ ರೋಟರಿ ಯಲ್ಲಿ ನೀರು ಮತ್ತು ಶುಚಿತ್ವ ಕ್ಕೆ ಸಂಬಂಧಿಸಿದ ಕ್ರಿಯಾತ್ಮಕ ಗುಂಪು (WASH – water ,sanitation, hygiene) ಇದರ ರೋಟರಿ ಜಿಲ್ಲೆ 3181 ರ ಪ್ರಥಮ ರಾಯಭಾರಿಯಾಗಿ ರೊಟೇರಿಯನ್ ಡಾ. ರಾಜೇಶ್ ಬೆಜ್ಜಂಗಳ ಅವರು ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ.

ಅಂತಾರಾಷ್ಟ್ರೀಯ ರೋಟರಿಯು WASH ಚಟುವಟಿಕೆಗಳನ್ನು ಏಷ್ಯಾ ,ಯುರೋಪ್, ಅಮೇರಿಕಾ ಮತ್ತು ಆಫ್ರೀಕನ್ ವಿಭಾಗ ಮಾಡಲಾಗಿದ್ದು 83 ನೇ ರಾಯಭಾರಿಯಾಗಿ ರಾಜೇಶ್ ಬೆಜ್ಜಂಗಳ ನೇಮಕಗೊಂಡಿದ್ದಾರೆ. ರೋಟರಿ ಭಾರತದಲ್ಲಿ 16 ಮಂದಿ ಇದ್ದು ಕರ್ನಾಟಕದಲ್ಲಿ ಇವರು ಎರಡನೇ ರಾಯಭಾರಿಯಾಗಿರುತ್ರಾರೆ. ರೋಟರಿ ಜಿಲ್ಲೆ 3181 ರ ಎಲ್ಲಾ ಕ್ಲಬ್ ಗಳಲ್ಲಿ ನಡೆಯುವ ನೀರು ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಚಟುವಟಿಕೆ ಗಳಿಗೆ ಮಾರ್ಗದರ್ಶನ ಮತ್ತು ದಾಖಲೀಕರಣವು ರಾಯಭಾರಿಗಳ ಜವಾಬ್ದಾರಿಯಾಗಿರುತ್ತದೆ.

ಈ ವಲಯದ ಸೇವಾ ಅನುಭವ ಮತ್ತು ರೋಟರಿಯ 185 online course ಗಳು ಸೇರಿದಂತೆ ವಿಶ್ವಬ್ಯಾಂಕ್, ವಿಶ್ವ ಸಂಸ್ಥೆ ಮತ್ತು ಸ್ವಚ್ಚ ಭಾರತ ಮಿಷನ್ ಗಳ  200 online course ಗಳು ಈ ಸ್ಥಾನ ಪಡೆಯಲು ಸಹಕರಿಸಿತು. ಪ್ರಸ್ತುತ ಅವರು ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ಅಧ್ಯಕ್ಷರಾಗಿದ್ದಾರೆ



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top