ಪುತ್ತೂರು: ಪುತ್ತೂರು ನಗರದ ಜನತಾ ಕಬ್ಬಿನ ಹಾಲು ಅಂಗಡಿ ಮಾಲಕ ಕೆ.ನಾರಾಯಣ ಶೆಟ್ಟಿ ಭಾನುವಾರ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ತೂರು ಹಳೆ ಪೊಲೀಸ್ ಸ್ಟೇಷನ್ ಕಟ್ಟಡದ ಬಳಿಯ ಕಟ್ಟಡದಲ್ಲಿ ಕಳೆದ ಹಲವಾರು ವರ್ಷಗಳಿಂದ ಕಬ್ಬಿನ ಹಾಲಿನ ಅಂಗಡಿ ನಡೆಸುತ್ತಿದ್ದರು.
ಪುತ್ತೂರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಂಚವಟಿ ಬಳಿಯ ನಿವಾಸಿಯಾಗಿರುವ ಮೃತರು ಜನಸಂಘದ ಕಾರ್ಯಕರ್ತರಾಗಿದ್ದು, ತುರ್ತು ಸಂದರ್ಭದಲ್ಲಿ ಜೈಲು ಸೇರಿದ್ದರು. ಪುತ್ತೂರು ಪುರಸಭೆಯ ಮಾಜಿ ಸದಸ್ಯರಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದ ಶ್ರೀ ಗಣೇಶೋತ್ಸವ ಸಮಿತಿ ಆರಂಭದ ಸದಸ್ಯರಾಗಿದ್ದರು.
ಮೃತರು ಪತ್ನಿ, ಪುತ್ರ, ಪುತ್ರಿಯರು, ಸೊಸೆ,. ಅಳಿಯಂದಿರನ್ನು ಅಗಲಿದ್ದಾರೆ.