ಆ.11,12, 13 : ಪುಸ್ತಕ ಹಬ್ಬ, ಪುಸ್ತಕ ದಾನಿಗಳ ಮೇಳ, ಸಾಹಿತ್ಯ ವೈಭವ | ಕಾರ್ಯಕ್ರಮಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಒಂದು ಪುಸ್ತಕ ಉಚಿತ

ಪುತ್ತೂರು: ಜ್ಞಾನಗಂಗಾ ಪುಸ್ತಕ ಮಳಿಗೆ ಪುತ್ತೂರು ಇವರ ಸಹಕಾರದೊಂದಿಗೆ ಆಗಸ್ಟ್ 11, 12, 13ರಂದು ಪುತ್ತೂರಿನ ಕೋ ಆಪರೇಟಿವ್  ಬ್ಯಾಂಕಿನ ಸಭಾಂಗಣದಲ್ಲಿ ಪುಸ್ತಕ ಹಬ್ಬ- ಪುಸ್ತಕದಾನಿಗಳ ಮೇಳ- ಸಾಹಿತ್ಯ ವೈಭವ ಎಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಈ  ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲರಿಗೂ ಒಂದು ಪುಸ್ತಕ ಉಚಿತವಾಗಿ ನೀಡಲಾಗುವುದು.

ಮೂರು ದಿನದಲ್ಲಿ ಪುಸ್ತಕ ಪ್ರದರ್ಶನ- ಮಾರಾಟ  10%ರಿಂದ 90% ರಿಯಾಯಿತಿ ದರದಲ್ಲಿ ಲಭ್ಯವಿದೆ.

ಅಧಿಕಮಾಸದಲ್ಲಿ ದಾನ ಮಾಡಿದರೆ ಉತ್ತಮ ಫಲವಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದಲ್ಲಿ ಪುಸ್ತಕದ ದಾನಿಗಳ ಮೇಳ ಹಮ್ಮಿಕೊಂಡಿದ್ದೇವೆ. ನಿಮ್ಮ ಮನೆಯಲ್ಲಿರುವ ಪುಸ್ತಕಗಳನ್ನು ಅಥವಾ ನೀವು ರಚಿಸಿರುವ ಕೃತಿಯನ್ನು ಅಥವಾ ಖರೀದಿಸಿಯೂ ದಾನ ರೂಪದಲ್ಲಿ ನೀಡಿ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆ ಕೈಜೋಡಿಸಬೇಕಾಗಿ ವಿನಂತಿಸಲಾಗಿದೆ.































 
 

ನೀವು ನೀಡುವ  ಪುಸ್ತಕಗಳನ್ನು ನಮ್ಮ ಕಾರ್ಯಕ್ರಮದಲ್ಲಿ ನಿಮ್ಮ ಹೆಸರಿನಲ್ಲಿ ಹಂಚುತ್ತೇವೆ. ಹೆಚ್ಚುವರಿ ಬಂದಲ್ಲಿ ಶಾಲಾ-ಕಾಲೇಜುಗಳ   ಗ್ರಂಥಾಲಯಗಳಿಗೆ ನೀಡುತ್ತೇವೆ. ಹೆಚ್ಚುವರಿ ಪುಸ್ತಕ ಇದ್ದಲ್ಲಿ ನಿಮ್ಮ ಮನೆಗೆ ಬಂದು ಸಂಗ್ರಹ ಮಾಡುತ್ತೇವೆ.  ಅಲ್ಲದೆ ದೂರದ ಊರುಗಳಿಂದ ಪುಸ್ತಕದಾನ ಮಾಡುವ  ದಾನಿಗಳು ಸುಗಮ ಗುಡ್ಸ್ ಅಥವಾ ವಿ.ಆರ್. ಎಲ್ ಗೂಡ್ಸ್ ಅಥವಾ  ಇತರ ಯಾವುದೇ ಗೂಡ್ಸ್ ನಲ್ಲಿ ಹಾಕಿದರೆ ಅದರ ವೆಚ್ಚವನ್ನು ನಾವು ಬರಿಸುತ್ತೇವೆ 

ಪುಸ್ತಕದಾನವಾಗಿ ಕೊಡುವ ದಾನಿಗಳಿಗೆ ಮುಂದಿನ ದಿನದಲ್ಲಿ…  ಪುಸ್ತಕದಾನಿಗಳ ಸಮಾವೇಶ ಎಂಬ ಪ್ರತ್ಯೇಕ   ಕಾರ್ಯಕ್ರಮ ಹಮ್ಮಿಕೊಂಡು ಪುಸ್ತಕ ಮಹಾದಾನಿ ಎಂಬ  ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು. ಪುಸ್ತಕದಾನ ಮಾಡುವ ದಾನಿಗಳು ಕಾರ್ಯಕ್ರಮದ ಸಂಯೋಜಕರಾದ ಶಂಕರಿ ಶರ್ಮ 9449856033 ಹಾಗೂ  ಶಾಂತ ಪುತ್ತೂರು 82775 91731 ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top