ಮಣಿಪುರದಲ್ಲಿ ಮತ್ತೆ ಹಿಂಸಾಚಾರ | ಗುಂಡಿನ ದಾಳಿಗೆ ಮೂವರು ಮೃತ್ಯು

ಇಂಫಾಲ್ : ಸ್ವಲ್ಪ ಮಟ್ಟಿಗೆ ಶಾಂತವಾಗಿದ್ದ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ.

ಶನಿವಾರ ಮುಂಜಾನೆ ಶಂಕಿತ ವ್ಯಕ್ತಿಗಳು ಬಿಷ್ಣುಪುರದ ಕ್ವಾಕ್ಕಾ ಬಳಿಯ ಉಖಾ ತಂಪಕ್ ಗ್ರಾಮದ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ ಪರಿಣಾಮ ತಂದೆ-ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ.

ದಾಳಿಕೋರರು ಕೇಂದ್ರ ಭದ್ರತಾ ಪಡೆಯ ನಿಯಂತ್ರಣಲ್ಲಿರುವ ಬೆಟ್ಟ-ಕಣಿವೆಗಳ ನಡುವಿನ ಬಫರ್ ವಲಯದಿಂದ ಕದ್ದುಮುಚ್ಚಿ ಬರುತ್ತಿದ್ದಾರೆ ಎನ್ನಲಾಗಿದ್ದು, ಅಲ್ಲಿಯ ಜನರ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top