ಪುತ್ತೂರು: ಠೇವಣಿ ಅವಧಿ ಮುಗಿದರೂ ಠೇವಣಿ ಹಣವನ್ನು ನಿಗದಿತ ಸಮಯದಲ್ಲಿ ವಾಪಾಸ್ಸು ನೀಡದೆ ವಂಚನೆ ಮಾಡಿರುವ ಕುರಿತು ಸೌಹಾರ್ದ ಸಹಕಾರಿ ಸಂಘದ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಅಕ್ಷಯ್ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ಒನ್ ಸೌಹಾರ್ದ ಸಹಕಾರಿ ಸಂಘ ಮತ್ತು ಈ ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಟಾರ್ಗೆಟ್ 2 ಸಕ್ಸೆಸ್ ಟ್ರೇಡಿಂಗ್ ಸಂಸ್ಥೆಯ ಅಧ್ಯಕ್ಷ ಗಿರೀಶ್ ರೈ, ಉಪಾಧ್ಯಕ್ಷ ಸುದೇಶ್ ರೈ ಅಲೆಕ್ಕಾಡಿ, ಮ್ಯಾನೇಜರ್ ಸಂದೀಪ್ ಹಾಗೂ ಇತರ ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಗ್ರಾಹಕ ನಾರಾಯಣ ನಾಯ್ಕ ಎಂಬವರು ನೀಡಿದ ದೂರಿನಂತೆ ಅ.ಕ್ರ..75-2023 ಕಲಂ : 406, 420 ಜತೆಗೆ 34 ಐ.ಪಿ.ಸಿ ಮತ್ತು 21, 22 Banning of Unregulated Deposit Schemes Act 2019 ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಸಂಸ್ಥೆ ಸಾರ್ವಜನಿಕರಿಂದ ಹಣವನ್ನು ಠೇವಣಿಯಾಗಿ ಸಂಗ್ರಹಿಸಿ ಹಾಗೂ ಸಿಬ್ಬಂದಿಗಳಿಗೆ ಗುರಿ ನಿಗದಿಪಡಿಸಿ ಒತ್ತಡ ಹೇರಿ ಠೇವಣಿಗಳನ್ನು ಸಂಗ್ರಹಿಸಿ ಸಾರ್ವಜನಿಕರಿಂದ ಹಣ ಪಡೆದು ಠೇವಣಿ ಅವಧಿ ಮುಗಿದರೂ ಹಣ ನಿಗದಿತ ಅವಧಿಯಲ್ಲಿ ವಾಪಾಸ್ಸು ನೀಡದೇ ನಂಬಿಕೆ ದ್ರೋಹ, ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.