ಭಾರೀ ಮಳೆ ಹಿನ್ನಲೆಯಲ್ಲಿ ಶಾಲೆಗಳಿಗೆ ರಜೆ | ಸರಿದೂಗಿಸಲು ನ.4 ರ ವರೆಗೆ ಶನಿವಾರ ದಿನಪೂರ್ತಿ ತರಗತಿ

ಪುತ್ತೂರು: ಭಾರೀ ಮಳೆಯ ಹಿನ್ನಲೆಯಲ್ಲಿ ಈ ಬಾರಿ ಶಾಲೆಗಳಿಗೆ ರಜೆ ನೀಡಲಾಗಿದ್ದು, ಅದನ್ನು ಸರಿದೂಗಿಸಲು ನವೆಂಬರ್ 4 ರ ವರೆಗೆ ಶನಿವಾರ ದಿನಪೂರ್ತಿ ತರಗತಿ ನಡೆಯಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಈ ಬಾರಿ ಮಳೆಯಿಂದ ಶಾಲೆಗಳಿಗೆ 6 ದಿನ ರಜೆ ನೀಡಲಾಗಿತ್ತು. ರಜೆಯನ್ನು ಸರಿದೂಗಿಸುವ ಹಿನ್ನಲೆಯಲ್ಲಿ ಶನಿವಾರ ಮಧ್ಯಾಹ್ನದ ಬಳಿಕವೂ ಪಾಠಗಳನ್ನು ಮಾಡುವ ಮೂಲಕ ದಿನಪೂರ್ತಿ ತರಗತಿ ನಡೆಯಲಿದೆ.

ಈ ಕುರಿತು ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಹೊರಡಿಸಿದ್ದು, ನ.4 ರ ವರೆಗೆ ಅಂದರೆ 12 ಶನಿವಾರದಂದು ತರಗತಿ ನಡೆಸಲು ನಿರ್ಧರಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top