ಪುತ್ತೂರು: ಪುತ್ತೂರು ನಲಿಕೆಯವರ ಸಮಾಜ ಸೇವಾ ಸಂಘದ ವತಿಯಿಂದ ವರ್ಷಾಚರಣೆ ಹಾಗೂ ಆಟಿ ದಿನ ಕಾರ್ಯಕ್ರಮ ಆ.6 ಭಾನುವಾರ ಇಲ್ಲಿಯ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷ ಚಂದ್ರ ಇಡ್ಪಾಡಿ ತಿಳಿಸಿದ್ದಾರೆ.
ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಳಗ್ಗೆ 10 ಗಂಟೆಗೆ ಕಾರ್ಯಕ್ರವನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದು, ನಲಿಕೆ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ರವಿ ಎಂಡೆಸಾಗು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ಸಂಘದ ಮಾಜಿ ಅಧ್ಯಕ್ಷ ಲೋಕಯ್ಯ ಸೇರ, ರಾಜ್ಯಾಧ್ಯಕ್ಷ ಸುಬ್ರಾಯ ಕಲ್ಮಂಜ, ಸಂಘದ ತಾಲೂಕು ಸ್ಥಾಪಕಾಧ್ಯಕ್ಷ ಚಂದ್ರ ಇಡ್ಪಾಡಿ, ಮಾಜಿ ಅಧ್ಯಕ್ಷ ಡೊಂಬಯ್ಯ ಕಾಪೆಜಾಲು, ಮಹಿಳಾ ಸಂಘದ ಅಧ್ಯಕ್ಷೆ ಉಮಾವತಿ ಕಡ್ಯ ಪಾಲ್ಗೊಳ್ಳಲಿದ್ದಾರೆ. ಸಂಘದ ರಾಜ್ಯ ಉಪಾಧ್ಯಕ್ಷ ರಾಮಣ್ಣ ಪಿಲಿಂಜ, ಪಾಣಾಜೆ ಗ್ರಾಪಂ ಸದಸ್ಯೆ ಸುಲೋಚನ ಸಹಿತ ಸಮಾಜ ಸೇವಕರು, ದೈವ ನರ್ತಕರು ಉಪಸ್ಥಿತರಿರುವರು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಈಶ್ವರಮಂಗಲದ ದೈವ ನರ್ತಕ ಗೋಪಾಲ ಅಜಲ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಶ್ರೀಕೃಷ್ಣ ಪಾಣಾಜೆ ಅವರನ್ನು ಸನ್ಮಾನಿಸಲಾಗುವುದು. ಎಸ್ಎಸ್ಎಸ್ಎಲ್ ಸಿಯಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರವಿ ಎಂಡೆಸಾಗು, ಕೃಷ್ಣ ಬುಳೇರಿಕಟ್ಟೆ, ಅರ್ಪಣಾ ಉಪಸ್ಥಿತರಿದ್ದರು.