ಶರವೂರು: ತಾಲೂಕಿನ ಆಲಂಕಾರು ಗ್ರಾಮದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆಯ ಪರಿಹಾರ ಪ್ರಾಯಶ್ಚಿತ್ತ ಕಾರ್ಯಕ್ರಮಗಳು ಜು.24 ರಿಂದ ಆರಂಭಗೊಂಡಿದ್ದು, ಆ.1 ಮಂಗಳವಾರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಪ್ರಧಾನ ಅರ್ಚಕರಾದ ಹರಿಪ್ರಸಾದ್ ಹಾಗೂ ರಾಘವೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ
ಜು.24 ಸೋಮವಾರ ಬೆಳಿಗ್ಗೆ 8 ರಿಂದ ಗಣಪತಿ ಹವನ, ಸುಕೃತ ಹವನ, ಪವಮಾನ ಹೋಮ, ದ್ವಾದಶಮೂರ್ತಿ ಆರಾಧನೆ, ಸಂಜೆ ಮಹಾಸುದರ್ಶನ ಹೋಮ, ಸಪ್ತಪತೀ ಪಾರಾಯಣ, ದುರ್ಗಾಪೂಜೆ ಜರಗಿತು.
ಜು.25 ಮಂಗಳವಾರ ಬೆಳಿಗ್ಗೆ 8 ರಿಮದ ಸುಕೃತಹವನ, ನವ ಚಂಡಿಕಾ ಹವನ, ದ್ವಾದಶ ದಂಪತಿ ಪೂಜೆ, ಸಂಜೆ 6 ರಿಂದ ಮಹಾಸುದರ್ಶನ ಹೋಮ, ಪ್ರೇತಾಕರ್ಷಣೆ, ಬಾಧಾ ಉಚ್ಛಾಟನೆ ಜರಗಿತು. ಜು.26 ಬುಧವಾರದಿಮದ ಜು.30 ಭಾನುವಾರದ ವರೆಗೆ ಭಾಗವತ ಪುರಾಣ ಮತ್ತು ದೇವೀ ಭಾಗವತ ಪುರಾಣ ಪಾರಾಯಣ ಜರಗಿತು. ಜು.31 ಸೋಮವಾರ ಬೆಳಿಗ್ಗೆ 8 ರಿಂದ ತಿಲಹೋಮ, ಸಂಜೆ ಕ್ಷೇತ್ರದಲ್ಲಿ ಪ್ರಾಸಾದ ಶುದ್ಧಿ, ರಕ್ಷೋಘ್ನ ಹೋಮ, ವಾಸ್ತುಪೂಜೆ ಮತ್ತು ವಾಸ್ತು ಬಲಿ ನಡೆಯಿತು.
ಇಂದು ಕ್ಷೇತ್ರದಲ್ಲಿ :
ಆ.1 ಇಂದು ಬೆಳಿಗ್ಗೆ 6 ರಿಂದ ಚಕ್ರಾಬ್ಧ ಪೂಜೆ, ದ್ವಾದಶಮೂರ್ತಿ ಆರಾಧನೆ, ಸಾಯುಜ್ಯ ಪೂಜೆ, ಶ್ರೀ ದೇವರಿಗೆ ಕ್ಷಾಳನಾದಿ ಬಿಂಬ ಶುದ್ಧಿ, ಪಂಚವಿಂಶತಿ ಕಲಶಾಭಿಷೇಕ ಜರಗಲಿದೆ ಎಂದು ಶ್ರೀ ಕ್ಷೇತ್ರ ಪ್ರಕಟಣೆಯಲ್ಲಿ ತಿಳಿಸಿದೆ.