ವಿಟ್ಲ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜನ ನೆಮ್ಮದಿಯಲ್ಲಿದ್ದಾರೆ, ಸರಕಾರದ ಐದು ಗ್ಯಾರಂಟಿ ಯೋಜನೆಗಳು ಪ್ರತೀ ಕುಟುಂಬಕ್ಕೂ ದೊರೆಯುತ್ತಿದೆ, ಈ ಯೋಜನೆಗಳು ಜನರಿಗೆ ಪ್ರಯೋಜನವಾಗಿದ್ದು ಜನ ಸರಕರದ ಯೋಜನೆಗೆ ಬೆಂಬಲ ನೀಡುತ್ತಿದ್ದಾರೆ, ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ಕಾಂಗ್ರೆಸ್ ಸಾಧನೆಯನ್ನು ತಿಳಿಸಿ ಅದನ್ನು ಮತವಾಗಿ ಪರಿವರ್ತನೆ ಮಾಡಬೇಕಾಗಿದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ವಿಟ್ಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.
ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರು ಈಗ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಮುಂದಿನ ತಿಂಗಳು ಪ್ರತೀ ಮನೆ ಯಜಮನಿಯ ಖಾತೆಗೆ ೨ ಸಾವಿರ ಜಮೆಯಾಗಲಿದೆ, ವಿದ್ಯುತ್ ಉಚಿತವಾಗಲಿದೆ, ೫ ಕೆ ಜಿ ಅಕ್ಕಿ ಮತ್ತು ೫ ಕೆ ಜಿ ಅಕ್ಕಿಯ ಹಣ ಖಾತೆಗೆ ಜಮಾವಣೆಯಗಿದೆ. ಉಚಿತವಾಗಿ ಸರಕಾರಿ ಬಸ್ಸುಗಳಲ್ಲಿ ಮಹಿಳೆಯರು ಸಂಚಾರ ಮಾಡುತ್ತಿದ್ದಾರೆ ಇದೆಲ್ಲವೂ ಕಾಂಗ್ರೆಸ್ ಬಡವರಿಗಾಗಿ ಮಾಡಿದ ಯೋಜನೆಗಳಾಗಿದೆ ಎಂದು ಶಾಸಕರು ಹೇಳಿದರು. ಸರಕಾರ ಒಳ್ಳೆಯ ಯೋಜನೆಗಳನ್ನು ಇನ್ನೂ ಜಾರಿ ಮಾಡಲಿದ್ದು ಪ್ರತೀಯೊಬ್ಬ ಕಾರ್ಯಕರ್ತನೂ ಪಕ್ಷ ಕಟ್ಟುವಲ್ಲಿ ಮುತವರ್ಜಿವಹಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.
ಮಹಿಳಾ ತಂಡವನ್ನು ಕಟ್ಟಬೇಕಿದೆ
ಪಕ್ಷವನ್ನು ಕಟ್ಟಲು ಮಹಿಳೆಯರ ತಂಡವನ್ನು ಕಾರ್ಯಕರ್ತರು ಕಟ್ಟಬೇಕು. ಈಗಾಗಲೇ ಸರಕರದ ಗ್ಯಾರಂಟಿ ಯೋಜನೆಗಳು ಮಹಿಳೆಯರ ಪರವಾಗಿದ್ದು ಇದನ್ನು ಬಳಸಿಕೊಂಡು ಪ್ರತೀ ಬೂತ್‌ನಲ್ಲಿ ಮಹಿಳೆಯರ ತಂಡವನ್ನು ಕಟ್ಟುವ ಮೂಲಕ ಪಕ್ಷದ ಪರ ಪ್ರಚಾರವನ್ನು ನಡೆಸಬೇಕು. ಮುಂದಿನ ದಿನಗಳಲ್ಲಿ ಮಹಿಳಾ ಕಾಂಗ್ರೆಸ್ ಸಮಾವೇಶವನ್ನು ನಡೆಸಬೇಕಾಗಿದ್ದು ಇದಕ್ಕಾಗಿ ಈಗಿಂದಲೇ ಎಲ್ಲರೂ ಸಜ್ಜಾಗಬೇಕು ಎಂದು ಶಾಸಕರು ಹೇಳಿದರು.
ಮೂರು ತಿಂಗಳ ಬಳಿಕ ಹೊಸ ಪಡಿತರ ಕಾರ್ಡು
ಹೊಸ ಪಡಿತರ ಚೀಟಿ ಸಿಗುತ್ತಿಲ್ಲ ಎಂಬ ದೂರುಗಳಿವೆ ಎಂದು ಶಾಸಕರ ಗಮನಕ್ಕೆ ತಂದಾಗ ಹೊಸ ಪಡಿತರ ಚೀಟಿಯನ್ನು ಮೂರು ತಿಂಗಳ ಬಳಿಕ ನೀಡಲಾಗುತ್ತದೆ. ಸುಮಾರು ೧ ಕೋಟಿ ಅರ್ಜಿಗಳು ಬಾಕಿ ಇದೆ. ಆರೋಗ್ಯ ಸಮಸ್ಯೆಗಳಿದ್ದವರು ಆಸ್ಪತ್ರೆಗೆ ಅಥವಾ ವಿಮೆ ಪಡೆದುಕೊಳ್ಳಲು ರೇಶನ್ ಕಾರ್ಡು ಬೇಕಾದಲ್ಲಿ ಅದನ್ನು ಸಂಬಂದಿಸಿದವರ ಗಮನಕ್ಕೆ ತಂದರೆ ತುರ್ತು ಪರಿಗಣಿಸಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.
ವೇದಿಕೆಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷರಾದ ಡಾ. ರಾಜಾರಾಂ ಕೆ ಬಿ, ಜಿಪಂ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷರಾದ ಪ್ರವೀಣ್ ಚಂದ್ರ ಆಳ್ವ, ಮುರಳೀಧರ್ ರೈ ಮಠಂತಬೆಟ್ಟು, ಪಟ್ಟಣ ಪಂಚಾಯತ್ ಸದಸ್ಯ ವಿಕೆಎಂ ಅಶ್ರಫ್, ಬ್ಲಾಕ್ ಅಲ್ಪಸಂಖ್ಯತ ಘಟಕದ ಅಧ್ಯಕ್ಷರಾದ ಅಬ್ದುಲ್ ಕರೀಂ ಕುದ್ದುಪದವು, ವಿಟ್ಲ ಬ್ಲಾಕ್ ಸಂಘಟನಾ ಕಾರ್ಯದರ್ಶಿ ರಮಾನಾಥ ವಿಟ್ಲ, ನಗರ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಪ್ರಹ್ಲಾದ್ ಉಪ್ಪಿನಂಗಡಿ, ಬ್ಲಾಕ್ ಉಪಾಧ್ಯಕ್ಷರಾದ ಜಯರಾಂ ಬಳ್ಳಾಲ್ ಬೀಡು, ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಶೀದ್ ವಿ ಎಂ, ಕಾರ್ಯದರ್ಶಿ ಸುನಿತಾ ಕೋಟ್ಯಾನ್, ಬ್ಲಾಕ್ ಕಾರ್ಯದರ್ಶಿ ಅಬ್ದುಲ್‌ರಹಿಮಾನ್ ಯುನಿಕ್, ಎಸ್ ಸಿ ಘಟಕದ ಅಧ್ಯಕ್ಷ ರಾಮಣ್ಣ ಪಿಲಿಂಜ, ಮಾಜಿ ಬ್ಲಾಕ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಯೂತ್ ಬ್ಲಾಕ್ ಅಧ್ಯಕ್ಷರಾದ ಫಾರೂಕ್ ಪೆರ್ನೆ ಮೊದಲಾದವರು ಉಪಸ್ಥಿತರಿದ್ದರು.