ಶಾಖಾ ಪ್ರಬಂಧಕರು, ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಮತ್ತು ಅವಿರತ ಪರಿಶ್ರಮದಿಂದ ಸಂಘ ಬೆಳೆದು ಬಂದಿದೆ : ಚಿದಾನಂದ ಬೈಲಾಡಿ | ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ | ಸಂಘದ ಸದಸ್ಯರಿಗೆ ಶೇ.13 ಡಿವಿಡೆಂಡ್

ಪುತ್ತೂರು: ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಭಾನುವಾರ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದ ಸಭಾಭವನದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದ.ಕ. ಜಿಲ್ಲೆಗೆ ಪುತ್ತೂರು ತಾಲೂಕು ಕೇಂದ್ರ ಸ್ಥಾನವಾಗಿದ್ದು, ಮೊಳಹಳ್ಳಿ ಶಿವರಾಯರಂತಹ ಹಿರಿಯ ಸಹಕಾರಿ. ದುರೀಣರ ದೂರದೃಷ್ಟಿಯಿಂದ ಮತ್ತೂರಿನಲ್ಲಿ ಇವತ್ತು ಸಾಕಷ್ಟು ಸಹಕಾರ ಸಂಸ್ಥೆಗಳು ಬೆಳೆದು ನಿಂತಿದೆ ಈ ಹಿನ್ನಲೆಯಲ್ಲಿ ಹೆಚ್ಚು ಜನಸಂಖ್ಯೆಯುಳ್ಳ ಗೌಡ ಸಮುದಾಯದ ಸಂಘಟನೆಯು ಹಲವಾರು ದಶಕದ ಹಿಂದೆಯೇ ಪ್ರಾರಂಭಗೊಂಡಿದ್ದು, ಡಿ.ವಿ ಸದಾನಂದ ಗೌಡ ಶಾಸಕರಾಗಿದ್ದಾಗ ಅವರ ಸಲಹೆಯಂತೆ ಒಕ್ಕಲಿಗ ಗೌಡ ಸೇವಾ ಸಂಘ ನೂತನ ಬೈಲಾದೊಂದಿಗೆ ನೋಂದಣಿಗೊಂಡು ಇಡ್ಯಡ್ಕ ಮೋಹನ ಗೌಡರ ಸಾರಥ್ಯದಲ್ಲಿ 20 ಮಂದಿ ಪ್ರವರ್ತಕರ ತಂಡ, ಕುರುಂಜಿ ವೆಂಕಟರಮಣ ಗೌಡ, ಗುಂಡ್ಯ ಅಣ್ಣಯ್ಯ ಗೌಡ, ಕಮ್ಮಾರ ಬಾಲಕೃಷ್ಣ ಗೌಡ, ಸಿ.ಪಿ. ಜಯರಾಮ ಗೌಡ ಮುಂತಾದ ಹಿರಿಯರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಸೆ.2 , 2002 ರಂದು  ಪರಮಪೂಜ್ಯ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ಆಶೀರ್ವಚನದೊಂದಿಗೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ನಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಸಭಾಭವನದಲ್ಲಿ  ಜಗನ್ನಾಥ ಬೊಮ್ಮೆಟ್ಟಿಯವರ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡಿತ್ತು. ಬಳಿಕದ ದಿನಗಳಲ್ಲಿ ಕಡಬ, ಉಪ್ಪಿನಂಗಡಿ, ನೆಲ್ಯಾಡಿ, ಕುಂಬ್ರ, ಆಲಂಕಾರು, ಪುತ್ತೂರು ಎಸ್.ಎಂ.ಟಿ. ಕಾಣಿಯೂರು ಮತ್ತು ಪ್ರಸ್ತುತ ಬೆಳ್ಳಾರೆ ಶಾಖೆಯನ್ನು ತೆರೆಯಲಾಯಿತು. ಪ್ರಸ್ತುತ 9 ಶಾಖೆಗಳು ಸಕ್ರೀಯವಾಗಿ ವ್ಯವಹಾರವನ್ನು ನಡೆಸುತ್ತಾ ಇದ್ದು, ಸುಮಾರು 6,300ಕ್ಕೂ ಮಿಕ್ಕಿ ಸದಸ್ಯರನ್ನು ಹೊಂದಿದ್ದು, ಸುಮಾರು 3.91 ಕೋಟಿ ಪಾಲುಬಂಡವಾಳ ಹೊಂದಿರುತ್ತದೆ ಎಂದರು.

ಇತ್ತೀಚಿಗೆ ಎಲ್ಲಾ ಶಾಖೆಗಳನ್ನು ಆಧುನೀಕರಣಗೊಳಿಸಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಲೆಕ್ಕಪರಿಶೋಧನೆಯಲ್ಲಿ ಸತತ ‘ಎ’ ತರಗತಿ ಶ್ರೇಣಿಯನ್ನು ಪಡೆಯುತ್ತಾ ಇದೆ. ವ್ಯವಹಾರಗಳು ಇನ್ನಷ್ಟು ಪರಿಪೂರ್ಣವಾಗಲು ಎಲ್ಲಾ ಶಾಖೆಗಳಿಗೆ ಸ್ಥಳೀಯ ಪ್ರಮುಖರ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈ ರೀತಿ ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು ರೂ. 400ಕೋಟಿ ಮಿಕ್ಕಿ ವ್ಯವಹಾರ ಮಾಡಲಾಗಿದ್ದು, ರೂ. 1,05,89,208-05 ಲಾಭಾಂಶ ಪಡೆಯಲಾಗಿದೆ. ಸಂಸ್ಥೆಯ ಮೇಲಿಟ್ಟ ಅಚಲವಾದ ನಂಬಿಕೆ, ಪ್ರೋತ್ಸಾಹ ಮತ್ತು ಸಹಕಾರಗಳಿಗೆ ನಾವು ಎಂದೆಂದೂ ಚಿರಋಣಿಗಳು. ಪರಿಪೂರ್ಣವಾದ ಆಡಳಿತ ಮಂಡಳಿ, ಉಪಾಧ್ಯಕ್ಷರು ಮತ್ತು ನಿರ್ದೇಶಕರು, ಸಲಹಾ ಸಮಿತಿ, ಅಂತರಿಕ ಲೆಕ್ಕಪರಿಶೋಧಕರು, ಮುಖ್ಯಕಾರ್ಯನಿರ್ವಹಣಾಧಿಕಾರಿ, ಶಾಖಾ ಪ್ರಬಂಧಕರು ಮತ್ತು ಎಲ್ಲಾ ಸಿಬ್ಬಂದಿ ವರ್ಗದವರ ಪ್ರಾಮಾಣಿಕ ಮತ್ತು ಅವಿರತ ಪರಿಶ್ರಮ ಹಾಗೂ ಗ್ರಾಹಕ ಬಂಧುಗಳ ಸಹಕಾರಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ತಮ್ಮೆಲ್ಲರ ಪ್ರೀತಿ, ವಿಶ್ವಾಸ, ನಂಬಿಕೆ, ಸಹಕಾರ ಮತ್ತು ಆಶೀರ್ವಾದಗಳೊಂದಿಗೆ ಸಂಘವು ಇನ್ನಷ್ಟು ಯಶಸ್ವಿನತ್ತ ಮುನ್ನುಗ್ಗಲಿ ಎಂದರು.































 
 

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಯು.ಪಿ.ರಾಮಕೃಷ್ಣ, ನಿರ್ದೇಶಕರಾದ ಮೋಹನ ಗೌಡ ಇಡ್ಯಡ್ಕ, ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳುವೇಲು, ಸುದರ್ಶನ ಗೌಡ ಕೋಡಿಂಬಾಳ, ಸಂಜೀವ ಗೌಡ ಕೆ., ಸತೀಶ ಪಾಂಬಾರು, ಪ್ರವೀಣ್ ಕುಂಟ್ಯಾನ, ಲೋಕೇಶ್ ಚಾಕೋಟೆ, ಸುಪ್ರೀತಾ, ತೇಜಸ್ವಿನಿ ಶೇಖರ ಗೌಡ, ಆಂತರಿಕ ಲೆಕ್ಕಪರಿಶೋಧಕ ಶ್ರೀಧರ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕೆ., ವಿವಿಧ ಶಾಖಾ ವ್ಯವಸ್ಥಾಪಕರಾದ ತೇಜಸ್ವಿನಿ, ಶಿವಪ್ರಸಾದ್ ಎ., ದಿನೇಶ್ ಪಿ., ವಿನೋದ್ ರಾಜ್ ಎಸ್‍., ಹರೀಶ್ ವೈ, ರೇವತಿ ಎಚ್., ನಿಶ್ಚಿತಾ ಯು.ಡಿ., ಪದ್ಮಶ್ರೀ ಪಿ., ಕಾರ್ತಿಕ್ ಎಂ., ಎಲ್ಲಾ ಶಾಖೆ ಯ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top