ಪುತ್ತೂರು:ಕಾರ್ಮಿಕ ವರ್ಗವಾಗಿರುವ ಟೈಲರ್ಸ್ ಗಳ ಸಮಸ್ಯೆ ಕುರಿತು ಮುಂದಿನ ದಿನಗಳಲ್ಲಿ ವಿಧಾನಸಭೆಯಲ್ಲಿ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಅವರು ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿಯ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸರಕಾರ ಅನುದಾನ ಕೊಡುವಂತಹದ್ದನ್ನು ಎಲ್ಲಿ ಸೆಲ್ಪ್ ಫಂಡ್ ಇದೆ ಅಲ್ಲಿಗೆ ಜೋಡಣೆ ಮಾಡಿದರೆ ಮಾತ್ರ ನಮ್ಮ ಕೆಲಸ ಸುಲಭವಾಗುತ್ತದೆ. ನೀವು ಕೂಡಾ ಕಾರ್ಮಿಕ ಇಲಾಖೆಯಲ್ಲಿ ಸೇರಿಸುವ ಕೆಲಸ ಮಾಡಿದರೆ ಯೋಜನೆಯ ಪಂಡ್ ಬರುತ್ತದೆ ಎಂದ ಅವರು, ಎಲ್ಲದಕ್ಕೂ ಸರಕಾರವನ್ನು ಕೇಳಿದರೆ ನೀಡುವುದು ಕಷ್ಟ. ನಿಮ್ಮೆ ಬೇಡಿಕೆಗಳನ್ನು ಕೊಡಿ ವಿಧಾನಸಭೆಯಲ್ಲಿ ಮಾತನಾಡುವ ವಿಚಾರವನ್ನು ನಾನು ಮಾಡ್ತೇನೆ ಎಂದರು.
ಪುತ್ತೂರು ಕ್ಷೇತ್ರ ಸಮಿತಿ ಅಧ್ಯಕ್ಷ ಜಯರಾಮ ಬಿ.ಎನ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆಎಸ್‍ಟಿಎ ರಾಜ್ಯ ಸಮಿತಿ ಅಧ್ಯಕ್ಷ ಬಿ.ಎ.ನಾರಾಯಣ, ಪ್ರಧಾನ ಕಾರ್ಯದರ್ಶಿ ಎ.ಪ್ರಜ್ವಲ್ ಕುಮಾರ್, ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಪ್ರಧಾನ ಕಾರ್ಯದರ್ಶಿ ಲಿಗೋಧರ ಆಚಾರ್ಯ, ಕೋಶಾಧಿಕಾರಿ ಈಶ್ವರ ಕುಲಾಲ್ ಪಾಲ್ಗೊಂಡು ಶುಭ ಹಾರೈಸಿದರು.
ರಾಜ್ಯ ಸಮಿತಿ ಆಂತರಿಕ ಲೆಕ್ಕ ಪರಿಶೋಧಕ ಬಿ.ರಘುನಾಥ್ ಸ್ವಾಗತಿಸಿ, ಸುರೇಖಾ ಪ್ರಾರ್ಥನೆ ಹಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಭು ಬಲ್ಯಾಯ ಕಾರ್ಯಕ್ರಮ ನಿರೂಪಿಸಿದರು.