ಸೌಜನ್ಯ ಕೊಲೆ ಪ್ರಕರಣ | ನೈಜ ಆರೋಪಿಗಳ ಪತ್ತೆಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಾರ್ಥನೆ

ಧರ್ಮಸ್ಥಳ : ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಲಾಯಿತು.

ಸೌಜನ್ಯ ಕೊಲೆಯ ನೈಜ ಆರೋಪಿಗಳ ಪತ್ತೆಯಾಗಬೇಕು ಜತೆಗೆ ಕ್ಷೇತ್ರ ಆರೋಪಗಳಿಂದ ಮುಕ್ತಿ ಹೋಂದಬೇಕು ಎಂಬ ನಿಟ್ಟಿನಲ್ಲಿ ಭಕ್ತರು ಹಾಗೂ ಅರ್ಚಕರರು ಮಂಜುನಾಥ ಸ್ವಾಮೀ ಹಾಗೂ ಅಣ್ಣಪ್ಪ ಸ್ವಾಮಿ ಗುಡಿಯ ಮುಂದೆ ಭಾನುವಾರ ಪ್ರಾರ್ಥನೆ ಸಲ್ಲಿಸಿದರು.

ಈಗಾಗಲೇ ಅರ್ಚಕರು ಪ್ರಾರ್ಥನೆ ಮಾಡಿ, ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ಆರೋಪಿಗಳನ್ನು ಪತ್ತೆ ಹಚ್ಚಿಕೊಡಬೇಕು. ಜಗತ್ತಿಗೆ ನ್ಯಾಯ ನೀಡುವ ಧರ್ಮಸ್ಥಳ ಕ್ಷೇತ್ರದ ಮೇಲೆ ಇಂದು ಆರೋಪಗಳು ಕೇಳಿಬರುತ್ತಿವೆ. ಇದನ್ನು ತಪ್ಪಿಸಬೇಕು ಎಂದು ಪ್ರಾರ್ಥನೆ ಮಾಡಿದರು.
ಬಳಿಕ ಅಣ್ಣಪ್ಪ ಬೆಟ್ಟದ ಮುಂದೆ ತೆಂಗಿನಕಾಯಿ ಒಡೆಯಲಾಯಿತು. ಈ ಸಂದರ್ಭದಲ್ಲಿ ನೂರಾರು ಭಕ್ತರು ಉಪಸ್ಥಿತರಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top