ಸೌಜನ್ಯ ಕೊಲೆ ಪ್ರಕರಣ | ಮರು ತನಿಖೆಗೆ ಒತ್ತಾಯಿಸಿ ಒಕ್ಕಲಿಗ ಯುವ ಗೌಡ ಸಂಘದ ವತಿಯಿಂದ ಆ.1 ರಂದು ಸುಳ್ಯದಲ್ಲಿ ವಾಹನ ಜಾಥಾ ಮೂಲಕ ಸರಕಾರಕ್ಕೆ ಮನವಿ ಸಲ್ಲಿಕೆಗೆ ನಿರ್ಧಾರ

ಸುಳ್ಯ: ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣವನ್ನು ಸರಕಾರ ಮರು ತನಿಖೆಗೆ ಒಳಪಡಿಸಿ ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸಲು ಸುಳ್ಯದ ಗೌಡರ ಯುವ ಸೇವಾ ಸಂಘ ಒತ್ತಾಯಿಸಿದ್ದು, ಆ.1ರಂದು ಸುಳ್ಯದಲ್ಲಿ ವಾಹನ ಜಾಥಾ ನಡೆಸಿ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಲು ನಿರ್ಧರಿಸಿದೆ.

ಶನಿವಾರ ಸುಳ್ಯ ಪ್ರೆಸ್ರ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಟಾರ್ ಮಾತನಾಡಿ, ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣ 2011 ರಲ್ಲಿ ನಡೆದು ಇಂದಿಗೆ 11 ವರ್ಷಗಳಾಗಿವೆ. ಆ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ ಇದುವರೆ ನ್ಯಾಯ ಸಿಕ್ಕಿಲ್ಲ. ಇದುವರೆ ಬಂಧಿತನಾದ ಆರೋಪಿ ನಿರಾಪರಾದಿಯೆಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಈ ಪ್ರಕಣವನ್ನು ಮರು ತನಿಖೆ ನಡೆಸಿ ನೈಜ ಆರೋಪಿಗಳ ಪತ್ತೆಯಾಗಿ ಶಿಕ್ಷೆಯಾಗಬೇಕೆಂದು ನಾವು ಸರಕಾವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.

ಆ.`1ರಂದು ಸುಳ್ಯದ ವೆಂಕಟರಮಣ ಸೊಸೈಟಿ ಬಳಿಯಿಂದ ಬೆಳಗ್ಗೆ 10 ಗಂಟೆಗೆ ವಾಹನ ಜಾಥಾದ ಮೂಲಕ ಸುಳ್ಯ ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿ ಸುಳ್ಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದರು.



































 
 

ಅಂದು ಘಟನೆ ನಡೆದ ಎರಡು ದಿನದಲ್ಲಿ ನಾವು ಸುಳ್ಯ ಗೌಡ ಸಮಾಜದವರು ಬೆಳ್ತಂಗಡಿಯ ಸೌಜನ್ಯಳ ಮನೆಗೆ ಹೋಗಿ ಸಾಂತ್ವನ ಹೇಳಿದ್ದೇವೆ. ಆ ಬಳಿಕ ಆದಿಚುಂಚನ ಗಿರಿ ಸ್ವಾಮೀಜಿಯವರು ಬಂದಾಗಲೂ ಹೋಗಿ ಸೌಜನ್ಯ ಮನೆಯವರಿಗೆ ನಮ್ಮಿಂದಾದ ಸಹಾಯ ನೀಡಿದ್ದೆವು. ಆ ಮನೆ ಮಗಳಿಗೆ ನ್ಯಾಯ ಸಿಗಲು ಗೌಡ ಸಂಘ ಒತ್ತಾಯಿಸುತ್ತದೆ. ಮತ್ತು ಈ ರೀತಿಯ ಘಟನೆ ಸಮಾಜದಲ್ಲಿ ಮತ್ತೆಂದೂ ನಡೆಯಬಾರದು ಎಂದ ಅವರು ಬೇರೆ ಬೇರೆ ತನಿಖಾ ಸಂಸ್ಥೆಗಳು ನಮ್ಮಲ್ಲಿವೆ. ಅದಕ್ಕೆ ತನಿಖೆಗೆ ನೀಡುವುದಕ್ಕಿಂತ ಕರ್ನಾಟಕ ಪೋಲೀಸರಿಗೆ ಇದರ ತನಿಖೆಯ ಹೊಣೆ ನೀಡಬೇಕು. ಯಾವುದೇ ಒತ್ತಡ ಹೇರದೆ ಫ್ರೆಂಡ್ ಹ್ಯಾಂಡ್ ನೀಡಿದರೆ 24 ಗಂಟೆಯೊಳಗೆ ಆರೋಪಿಯನ್ನು ನಮ್ಮ ಪೋಲೀಸರು ಬಂಧಿಸುತ್ತಾರೆಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸಮಾಜದ ಕುರಿತು ಅವಹೇಳನ ಸಂದೇಶ ಬರುತ್ತಿದೆ. ಇದು ಸರಿಯಲ್ಲ. ನಮ್ಮ ಸಂಘಟನೆ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ನ್ಯಾಯದ ಪರ ನಿರಂತರವಾಗಿ ನಾವು ಧ್ವನಿಯಾಗಿರುತ್ತೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಗೌಡ ಸಂಘದ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ರಾಧಾಕೃಷ್ಣ ಗೌಡ ಸಂಘದ ಪ್ರಮುಖರಾದ ಎ.ವಿ. ತೀರ್ಥರಾಮ, ಡಾ| ಎನ್.ಎ.ಜ್ಞಾನೇಶ್, ಪಿ.ಎಸ್.ಗಂಗಾಧರ್, ಕೂಸಪ್ಪ ಗೌಡ ಮುಗುಪ್ಪು, ಚಿದಾನಂದ ಕಾಡುಪಂಜ, ಪುರುಷೋತ್ತಮ ಬೊಡ್ಡನಕೊಚ್ಚಿ, ಉಮೇಶ್ ಕೆ.ಎಂ.ಬಿ., ರಮಾನಂದ ಬಾಳೆಕಜೆ, ಶ್ರೀಮತಿ ವಿನುತಾ ಹರೀಶ್ಚಂದ್ರ ಪಾತಿಕಲ್ಲು, ವೀರಪ್ಪ ಗೌಡ ಕಲ್, ತೀರ್ಥರಾಮ ಅಡ್ಕಬಳೆ, ಜಯರಾಮ ಪಿಂಡಿಬನ, ಗಿರೀಶ್ ಡಿ.ಎಸ್., ಸುರೇಶ್ ಅಮೈ ಇದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top