ದರ್ಬೆ ಪ್ರಶಾಂತ್ ಮಹಲ್‍ ನಲ್ಲಿ ಮೇಳೈಸಿದ “ಆಟಿಡೊಂಜಿ ದಿನ” | ಜನಮನ ಸೂರೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮಗಳು, 49 ಬಗೆಯ ಖಾದ್ಯಗಳು

ಪುತ್ತೂರು: ಸವಣೂರು ಸೀತಾರಾಮ ರೈ ಅವರ ಮುಂದಾಳುತ್ವದಲ್ಲಿ ತುಳು ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ “ಆಟಿಡೊಂಜಿ ದಿನ” ಕಾರ್ಯಕ್ರಮ ಶನಿವಾರ ದರ್ಬೆ ಪ್ರಶಾಂತ್ ಮಹಲ್‍ ನ ಸನ್ನಿಧಿ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಆಟಿದ ಅಟಿಲ್ ನಲ್ಲಿ 49 ಬಗೆಯ ಖಾದ್ಯಗಳು ನೆರೆದಿದ್ದವರ ಬಾಯಿ ಚಪ್ಪರಿಸುವಂತೆ ಮಾಡಿತು.

ಕಾರ್ಯಕ್ರಮದ ಆರಂಭದಲ್ಲಿ ಹಿರಿಯರ ಆಟಿ ತಿಂಗಳ ಸುಂದರ ಆಟವಾಗಿರುವ “ಚೆನ್ನಮಣೆ” ಆಟವನ್ನು ಮಹಿಳೆಯರು ಹಾಗೂ ಪುರುಷರು ಆಟವಾಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಒದಗಿಸಲಾಯಿತು. ಪುರುಷರಕಟ್ಟೆ, ಗುರುಕುಲ ಕಲಾ ಕೇಂದ್ರದ ಮಕ್ಕಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ, ಆಟಿ ಕುರಿತ ಗಾಯನವು ಸಭಿಕರನ್ನು ಸೆಳೆಯುವಂತೆ ಮಾಡಿತ್ತು. ಪ್ರವೇಶ ದ್ವಾರ, 49 ಬಗೆಯ ಬಂಜಾರಊಟದ ಕ್ವಾಟಾರ್ ಅನ್ನು ತೆಂಗಿನಮರದ ತಾಳೆಗರಿಯಿಂದ ಅಲಂಕೃತಗೊಳಿಸಲಾಗಿತ್ತು.



































 
 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಕಾರಿ ರತ್ನ ಸವಣೂರು ಸೀತಾರಾಮ್ ರೈ ವಹಿಸಿರು. ಕನ್ನಡ ಪ್ರಾಧ್ಯಾಪಕ, ಅಂಕಣಕಾರ ನರೇಂದ್ರ ರೈ ದೇರ್ಲರವರು ಹಿಂಗಾರ ಅರಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ, ವಿದ್ಯಾರಶ್ಮಿ ಸಮೂಹವು ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್. ಶೆಟ್ಟಿ, ಉಪಸ್ಥಿತರಿದ್ದರು ಕಾರ್ಯಕ್ರಮವನ್ನು ಪ್ರಶಾಂತ್ ಮಹಲ್‌ನ ವ್ಯವಸ್ಥಾಪಕ ಮಧುಸೂದನ್ ಶೆಣೈ, ಹರೀಶ್ ಪೂಂಜ ಹಾಗೂ ಜಯರಾಂ ತಂಡದವರು ಸಂಘಟಿಸಿದರು. ಕು|ಪ್ರಜ್ಞಾ ಓಡಿಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು .

ಆಟದ ಆಟಿಲ್‍ನಲ್ಲಿ ಪದೆಂಜಿಪೇರ್, ಪತ್ರೋಡೆ, ಬಜಿಲ್, ತಲಿ ಬಾಜೆಲ್, ಬಂಜಾರ ಊಟದಲ್ಲಿ ಅಂಬಡೆ, ಮಾವಿನಕಾಯಿ, ಕರಂಡೆ ಕಾಯಿಯ ಉಪ್ಪಿನಕಾಯಿ, ತಿಮರೆ/ಕುಡು/ಪೂಂಬೆ ಚಟ್ಟಿ, ತೆಕ್ಕರೆದ ತಲ್ಲಿ, ತಜಂಕ್ ಪೆಲತ್ತರಿ ಸುಕ್ಕ ಕಣಿಲೆ ಸುಕ್ಕ ಉಪ್ಪಡ್ ಪಚ್ಚಿಲ್, ತೇಟ್ಲಿ ಗಸಿ, ಕಾಯ್ತಿನ ಪತ್ರೋಡೆ, ತಜಂಕ್‌ ಅಂಬಡೆ, ಮಂಜಲ್ ಇರೆತ ಗಟ್ಟಿ, ಬಾರೆದ ಇರೆತ ಗಟ್ಟಿ, ಪೆಲಕ್ಕಾಯಿದ ಗಟ್ಟಿ, ನೀ‌‍ದೋಸೆ, ಸೇಮೆ ಪೇರ್, ಪೆಲಕಾಯಿದ ಗಾರಿಗೆ, ನುರ್ಗೆ ತಪ್ಪುದ ಉಪ್ಪುಗರಿ, ಗಂಜಿ(ಕಜೆ ಅರಿ), ನುಪ್ಪು ಕುಡುತ್ತ ಸಾರು, ಉಪ್ಪುಂಚಿ, ತೌತೆ ಗಸಿ, ಕುಕ್ಕು ಪೆಜಕಾಯಿದ ಪಜ್ಜಿ ಕಜಿಪು, ಸಂಡಿಗೆ, ಪೆಲಕಾಯಿದ ಹಪ್ಪಳ, ಕಾಯ್ತಿನ ಪುಲಿಕೊಟೆ, ಬೆಯಿಪ್ಪಾಯಿನ ಪೆಲತ್ತರಿ, ಪೊತ್ತುದಿನ ಕುಡುಅರಿ, ಮೀನು ಮಾಂಸದ ಖಾದ್ಯಗಳಾದ ಎಟ್ಟಿ ಚಟ್ಟಿ, ಕೊಲ್ಲತ್ತಾರು ಚಟ್ಟಿ, ಕಡ್ಲೆ ಬಲ್ಯಾರ್ ಸುಕ್ಕ, ಕೋರಿ ಸುಕ್ಕ ಕೋರಿ ರೊಟ್ಟಿ, ನುಂಗೆಲ್ ಮೀನ್ದ ಕಜಿಪು, ಸಿಹಿ ಖಾದ್ಯಗಳಾದ ಮನ್ನಿ ಮೆಂತೆ ಗಂಜಿ, ಪದೆಂಜಿ ಸಲಾಯಿ ಪಾಯಸ, ಪೆಲಕ್ಕಾಯಿ+ಕಡೆ ಸಲಾಯಿ ಪಾಯಸ, ಅಲೆ, ಸಂಜೆ ಚಾ, ಗೋಳಿಬಜೆ ಹೀಗೆ 49 ಬಗೆಯ ಘಮಘಮಿಸುವ ಖಾದ್ಯಗಳನ್ನೊಳಗೊಂಡಿತ್ತು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top