ಪುತ್ತೂರು: ಪಡುವನ್ನೂರು ಗ್ರಾಮದಲ್ಲಿ ಇಂಗು ಗುಂಡಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಬುಧವಾರ ಪತ್ತೆಯಾಗಿದೆ.
ಪಡುವನ್ನೂರು ಗ್ರಾಮದ ಗುರಿಯಡ್ಕ ನಿವಾಸಿ ಐತ್ತಪ್ಪ ಮೂಲ್ಯ ಎಂಬವರೇ ಮೃತಪಟ್ಟವರು.
ಐತ್ತಪ್ಪ ಮೂಲ್ಯ ಸುಮಾರು ಒಂದು ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗಿರಲಿಲ್ಲ. ರಾತ್ರಿ ಸಮಯದಲ್ಲಿ ಅವರು ಯಾರಿಗೂ ಹೇಳದೆ ಹೊರಗೆ ಹೋಗುತ್ತಿದ್ದರು ಎನ್ನಲಾಗಿದೆ. ಭಾನುವಾರ ರಾತ್ರಿ ಊಟ ಮಾಡಿ ಮಲಗಿದವರು ಸೋಮವಾರ ಬೆಳಗ್ಗೆ ನಾಪತ್ತೆಯಾಗಿದ್ದರು. ಬುಧವಾರ ಮೃತದೇಹ ನೆರೆಮನೆಯ ಶೀನ ಗೌಡ ಮಾಪಳ ಎಂಬವರ ಮನೆ ಬಳಿಯ ಇಂಗು ಗುಂಡಿಯಲ್ಲಿ ಪತ್ತೆಯಾಗಿದೆ. ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದ್ದು, ಪುತ್ರ ನೀಡಿ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.