ಬೆಳ್ಳಾರೆ : ಒಂದು ವರ್ಷದ ಹಿಂದೆ ಪಿಎಫ್ಐನ ಮತಾಂಧ ಜಿಹಾದಿಗಳಿಂದ ಹತ್ಯೆಗೀಡಾಗಿರುವ ಬಿಜೆಪಿಯ ಯುವ ಮುಖಂಡ, ದಿ ಪ್ರವೀಣ್ ನೆಟ್ಟಾರು ಅವರ ಸ್ಮ್ರತಿದಿನ ದಂದು ಅವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ರವರು ಭೇಟಿ ನೀಡಿ ಪ್ರವೀಣ್ ನೆಟ್ಟಾರು ಅವರ ಮನೆಯ ಪರಿಸರದಲ್ಲಿರುವ ಅವರ ಪುತ್ಥಳಿಗೆ ಮಾಲಾರ್ಪಾಣೆಗೈದರು.
ನಂತರ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಹಾಗೂ ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ವತಿಯಿಂದ ಬೆಳ್ಳಾರೆ ಪೆರುವಾಜೆ ಜೆ.ಡಿ. ಆಡಿಟೋರಿಯಂ ಜರುಗಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿದರು. .
ಈ ಸಂದರ್ಭದಲ್ಲಿ ಬಿಜೆಪಿ, ಪರಿವಾರ ಸಂಘಟನೆಯ ಎಲ್ಲಾ ಪ್ರಮುಖರು, ಕಾರ್ಯಕರ್ತರು, ಹಿತೈಷಿಗಳು, ಅನ್ಯಾನ್ಯ ಜವಾಬ್ದಾರಿಯ ಎಲ್ಲಾ ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.