ಗ್ರಾಪಂ ಉಪ ಚುನಾವಣೆ | ಆರ್ಯಾಪು ಗ್ರಾಪಂನಿಂದ ಪುತ್ತಿಲ ಪರಿವಾರ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯರಿಗೆ ಗೆಲುವು

ಪುತ್ತೂರು: ತಾಲೂಕಿನ ಆರ್ಯಾಪು ಗ್ರಾಪಂನ ವಾರ್ಡ್ -2 ನಡೆದ ಉಪ ಚುನಾವಣೆಯಲ್ಲಿ ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಬಲ್ಯಾಯ 499 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

ವಾರ್ಡ್ -2 ರ ಹಿಂದುಳಿದ ವರ್ಗ “ಎ” ಮೀಸಲು ಕ್ಷೇತ್ರದ ಬಿಜೆಪಿ ಬೆಂಬಲಿತ ಸದಸ್ಯ ರುಕ್ಮಯ್ಯ ಮೂಲ್ಯರ ನಿಧನದಿಂದ ತೆರವಾದ ಸ್ಥಾನಕ್ಕೆ ಜು.23 ರಂದು ಉಪ ಚುನಾವಣೆ ನಡೆದಿತ್ತು. ಒಟ್ಟು 1237 ಮತಗಳ ಪೈಕಿ 999 ಮತ ಚಲಾವಣೆಯಾಗಿತ್ತು. ಈ ಪೈಕಿ ಪುತ್ತಿಲ ಪರಿವಾರದ ಸುಬ್ರಹ್ಮಣ್ಯ ಬಲ್ಯಾಯ 499 ಮತ, ಕಾಂಗ್ರೆಸ್ ನ ಪುರುಷೋತ್ತಮ ಪ್ರಭು 353 ಮತ ಹಾಗೂ ಬಿಜೆಪಿಯ ಜಗದೀಶ ಭಂಡಾರಿ 140 ಮತಗಳನ್ನು ಪಡೆದುಕೊಂಡಿದೆ.

ಕಳೆದ ಬಾರಿ ಬಿಜೆಪಿ ಪಾಲಿಗಿದ್ದ ಸ್ಥಾನವನ್ನು ಪುತ್ತಿಲ ಪರಿವಾರ ಕಸಿದುಕೊಂಡಿದೆ. ಬಿಜೆಪಿ ಮೂರನೇ ಸ್ಥಾನಕ್ಕಷ್ಟೇ ತೃಪ್ತಿ ಪಡೆದುಕೊಂಡಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top