ಗೃಹ ಮಂತ್ರಿ ಪರಮೇಶ್ವರರಿಂದ ಕೆಜೆ, ಡಿಜೆ ಹಳ್ಳಿ ಅಮಾಯಕ ಮೇಲಿನ ಕೇಸು ಹಿಂತೆಗೆಯಬೇಕು ಹೇಳಿಕೆ | ವಿಹಿಂಪ, ಬಜರಂಗದಳ ಖಂಡನೆ

ಪುತ್ತೂರು: ಪರಮೇಶ್ವರರವರು ಗೃಹ ಮಂತ್ರಿಗಳಾಗಿ ಕೆಜೆ ಹಳ್ಳಿ .ಡಿಜೆ ಹಳ್ಳಿಯ ಅಮಾಯಕರ ಹೆಸರಿನಲ್ಲಿರುವ ಕೇಸ್ ಗಳನ್ನು ತೆಗೆಯಬೇಕೆಂದು ಹೇಳಿರುವುದನ್ನು ವಿಶ್ವ  ಹಿಂದೂ ಪರಿಷದ್ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಬಜರಂಗದಳ ಪ್ರಾಂತ ಸಹಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ಇಂದು ಉಡುಪಿಯಲ್ಲಿ ಬಹಳ ಒತ್ತಡಕ್ಕೆ ಮಣಿದು ಶೌಚಾಲಯದಲ್ಲಿ ವೀಡಿಯೊ ಮಾಡಿರುವ ಮತಾಂಧ ದುಷ್ಟ ಶಕ್ತಿಗಳ ವಿರುದ್ಧ ಎಫ್.ಐ.ಅರ್ ಮಾಡಿದ್ದಾರೆ. ಆದರೆ ಅವರನ್ನು ಬಂಧನ ಮಾಡಲು ಆಗದ ಪೊಲೀಸ್  ವ್ಯವಸ್ಥೆಯನ್ನು ಖಂಡಿಸುತ್ತೇವೆ.

ಇದೇ ರೀತಿಯ ಕೆಜೆ ಹಳ್ಳಿ .ಡಿಜೆ ಹಳ್ಳಿಯ ಅಮಾಯಕರು ಅಂತ ಹೆಸರಿನಲ್ಲಿ ಅವರ ಕೇಸನ್ನು ವಾಪಸ್ಸು ತೆಗೆದುಕೊಂಡು ಇಡೀ ರಾಜ್ಯದಲ್ಲಿ ಅರಾಜಕತೆ ಉಂಟಾಗುವುದರಲ್ಲಿ ಅನುಮಾನವಿಲ್ಲ ಹಾಗೂ ಉಡುಪಿಯ ಕೇಸ್ ದಾಖಲಾಗಿರುವ ಆರೋಪಿಗಳನ್ನು ತೀವ್ರ ಉನ್ನತ ಮಟ್ಟದ ತನಿಖೆ ನಡೆಸಿ ಇದರ ಹಿಂದೆ ಇರುವಂತಹ ನೀಚ ಕೆಲಸ ಮಾಡಿರುವಂತಹ ಮತಾಂಧ ಅಥವಾ ದುಷ್ಟ ಶಕ್ತಿಗಳು ಯಾರು ಇದ್ದಾರೆ ಅವರನ್ನು ಬಂಧನ ಮಾಡಬೇಕೆಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಆಗ್ರಹಿಸುತ್ತದೆ.































 
 

 ಈ ಹಿಂದೆ ಹಿಂದಿನ ಸಿದ್ಧರಾಮಯ್ಯ ಅವರ ಸರ್ಕಾರ ಇದ್ದಾಗ ಹುಣಸೂರಿನ ಭಾಗದಲ್ಲಿ ನಡೆದಿರತಕ್ಕಂತಹ ಡಿ.ವೈ.ಎಸ್ಪಿ ಅವರ ವಾಹನದ ಮೇಲೆ ಬೆಂಕಿ ಹಾಕಿರುವ, ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಪ್ರಕರಣದಲ್ಲಿ ಭಾಗಿಯಾಗಿದ್ದ ಪಿ.ಎಫ್.ಐ ಸಂಘಟನೆಯ ಕಾರ್ಯಕರ್ತರ ಮೇಲೆ ಇದ್ದ ಕೇಸ್ ಗಳನ್ನು ವಾಪಸ್ ಪಡೆದಿದ್ದರು. ಅದರ ನಂತರ ನಡೆದಿರುವ ಪಿ.ಎಫ್.ಐ ಹಾಗೂ ಕೆ.ಎಫ್.ಡಿ ಸಂಘಟನೆಯ ರಾಜ್ಯದಾದ್ಯಂತ ಅಟ್ಟಹಾಸವನ್ನು ಜನತೆ ಗಮನಿಸಿದ್ದಾರೆ ಈ ಎಲ್ಲಾ ವಿಷಯವಾಗಿ ಕಾನೂನು ಸುವ್ಯವಸ್ಥೆ ಬಗ್ಗೆ ಕೇವಲ Anty Communal Wing ಸ್ಥಾಪನೆ ಮಾಡಿದರೆ ಸಾಲದು. ಎಲ್ಲರಿಗೂ ಸಮಾನ ಹಕ್ಕು,ನ್ಯಾಯ ಕೊಡುವಂತಹ ಕೆಲಸ ಸರ್ಕಾರ ಮಾಡಬೇಕೆಂದು ಆಗ್ರಹಿಸುತ್ತೇವೆ ಎಂದರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top