ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ 34ನೇ ನೆಕ್ಕಿಲಾಡಿ ಗ್ರಾಮದ ಕರ್ವೇಲಿನಲ್ಲಿ 110/11 ಕೆ.ವಿ. ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ 3.26 ಎಕರೆ ಸರಕಾರಿ ಜಮೀನು ಮಂಜೂರಾಗಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು ಅವರ ಶಾಸಕತ್ವದ ಅವಧಿಯಲ್ಲೇ ಮಂಜೂರುಗೊಂಡಿತ್ತು.
ಉಪ್ಪಿನಂಗಡಿ ಭಾಗದ ಪ್ರಮುಖ ಬೇಡಿಕೆಗಳಲ್ಲಿ ಇದು ಒಂದಾಗಿದ್ದು, 34ನೇ ನೆಕ್ಕಿಲಾಡಿ ಗ್ರಾಮದ ಕರ್ವೇಲಿನಲ್ಲಿ 110 ಕೆ.ವಿ. ಉಪಕೇಂದ್ರ ಸ್ಥಾಪನೆಗೆ ಯೋಜನೆ ರೂಪಿಸಲಾಗಿತ್ತು. ಇದೀಗ 40 ವರ್ಷದ ಬಳಿಕ ಪುತ್ತೂರು ತಾಲೂಕಿಗೆ 2ನೇ 110 ಕೆ.ವಿ. ಉಪಕೇಂದ್ರ ಮಂಜೂರುಗೊಂಡಿದೆ.
ಚುನಾವಣೆಗೆ ಮೊದಲು ಈ ಜಮೀನಿಗೆ ರೂ 1,04,97,899 ಕೋಟಿ ರೂಪಾಯಿ ಅನ್ನು ಪಾವತಿಸಲು ಕೆಪಿಟಿಸಿಎಲ್‌ಗೆ ಕಂದಾಯ ಇಲಾಖೆ ಸೂಚಿಸಿತ್ತು. ಆದರೆ ಪಾವತಿಸಲು ವಿಳಂಬವಾಗಿತ್ತು. ಇದೀಗ ರೂ. 1,04,97,899 ಅನ್ನು ಪಾವತಿಸಲು ಕ್ರಮ ಕೈಗೊಂಡು ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಲಾಗಿದ್ದು, ಇದೀಗ ಮಂಜೂರಾತಿ ಆದೇಶ ದೊರಕಿದ್ದು, ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.