ಬಡಗನ್ನೂರು: ಪಡುಮಲೆ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಆ.25 ರಂದು ನಡೆಯಲಿರುವ ಶ್ರೀ ವರ ಮಹಾಲಕ್ಷ್ಮೀ ವೃತ ಪೂಜಾ ಸಮಿತಿಯ ಸಭೆ ನಡೆಯಿತು.
ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಭಾಕರ ಗೌಡ ಕೋಡಿಯಡ್ಕ, ಧ.ಗ್ರಾ. ಯೋಜನೆಯ ಬಡಗನ್ನೂರು ಎ ಒಕ್ಕೂಟದ ಅಧ್ಯಕ್ಷ ಸುಬ್ಬಯ್ಯ ರೈ ಉಪಸ್ಥಿತರಿದ್ದರು.
ನೂತನ ಸಮಿತಿ ರಚನೆ :
ಈ ಸಂದರ್ಭದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸವಿತಾ ಗೆಜ್ಜೆಗಿರಿ, ಕಾರ್ಯದರ್ಶಿ ಸುನಿತಾ ರೈ ಮೇಗಿನಮನೆ, ಜತೆ ಕಾರ್ಯದರ್ಶಿಯಾಗಿ ಸುಜಾತ ಎಸ್. ಮೈಂದನಡ್ಕ, ಕೋಶಾಧಿಕಾರಿಯಾಗಿ ಶಂಕರಿ ಪಟ್ಟೆ ಅವರನ್ನು ಆಯ್ಕೆ ಮಾಡಲಾಯಿತು.
ಸಲಹೆಗಾರರಾಗಿ ಸುಬ್ಬಯ್ಯ ರೈ ಹಲಸಿನಡಿ, ಬಿ ಒಕ್ಕೂಟದ ಅಧ್ಯಕ್ಷ ಲಿಂಗಪ್ಪ ಗೌಡ ಮೋಡಿಕೆ, ರಾಮಣ್ಣ ಗೌಡ ಬಸವನಹಿತ್ತಿಲು, ಪುರಂದರ ರೈ ಸೇನೆರೆಮಜಲು ಮತ್ತು ಪ್ರಭಾಕರ ಗೌಡ ಕೋಡಿಯಡ್ಕ ಹಾಗೂ ಮನೋಜ್ ರೈ ಪೇರಾಲು, ಶ್ರೀನಿವಾಸ ಭಟ್ ಚಂದುಕೂಡ್ಲು ಅವರನ್ನು ಗೌರವಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು. ಸದಸ್ಯರಾಗಿ ಸುಶೀಲ ಪಕ್ಯೋಡು, ವಿನೋದ ಸೇನೆರಮಜಲು, ಪ್ರೇಮ ಅಣಿಲೆ, ರೇಖಾ ನಾಗರಾಜ್ ಪಟ್ಟೆ, ಪ್ರೇಮಾ ಮೈಂದನಡ್ಕ, ಯಶೋದಾ ಬಡಕ್ಕಾಯೂರು, ಕವಿತಾ ಪಟ್ಟೆ, ವಿಜಯಲಕ್ಷ್ಮೀ ಪಲ್ಲತ್ತಾರು, ಪಾರಿಜಾತ ಉಳಯ, ಜಯ ದೊಡ್ಡಡ್ಕ, ಶ್ರೀಮತಿ ಸುಳ್ಯಪದವು ಅವರನ್ನು ಆಯ್ಕೆ ಮಾಡಲಾಯಿತು.
ಯೋಜನೆಯ ಬಡಗನ್ನೂರು ಎ ಹಾಗೂ ಬಿ ಒಕ್ಕೂಟದ ಘಟಕಗಳ ಸಹಕಾರದೊಂದಿಗೆ ಪೂಜೆ ನಡೆಸಲು ನಿರ್ಣಯಿಸಲಾಯಿತು.