ವಿಧಿಯ ಕ್ರೂರ ಲೀಲೆಗೆ ಸಿಕ್ಕಿ ಬಲಿಯಾದ ಬಜರಂಗದಳ ಸಕ್ರಿಯ ಕಾರ್ಯಕರ್ತರ ನೆನಪಿನಲ್ಲಿ ಬೃಹತ್ ರಕ್ತದಾನ ಶಿಬಿರ | 270 ಮಂದಿಯಿಂದ ರಕ್ತದಾನ

ಬಂಟ್ವಾಳ: ವಿಧಿಯ ಕ್ರೂರ ಲೀಲೆಗೆ ಸಿಲುಕಿ ಬಲಿಯಾದ ಬಜರಂಗದಳ ಕಾರ್ಯಕರ್ತರಾದ  ವಿಜಯ್ ಪುಣ್ಕೆದಡಿ, ಸುರೇಶ್ ಮೇಗಿನಮನೆ ಹಾಗೂ ನಿತಿನ್ ಪೂಜಾರಿ ನೆಲ್ಯಪಲ್ಕೆ ಅವರ ಸವಿನೆನಪಿಗಾಗಿ ಬಂಟ್ವಾಳ ಸರಪಾಡಿ ಪ್ರಖಂಡ ಬೃಹತ್ ರಕ್ತದ಻ನ ಶಿಬಿರ ಆಯೋಜಿಸುವ ಮೂಲಕ ಅಗಲಿದ ಕಾರ್ಯಕರ್ತರನ್ನು ನೆನಪಿಸುವ ಕಾರ್ಯ ಮಂಗಳವಾರ ನಡೆಯಿತು.

ಶಿಬಿರದಲ್ಲಿ ಸುಮಾರು 270 ಜನ ರಕ್ತದಾನಿಗಳು ರಕ್ತದಾನ ನೀಡಿ ಅಗಲಿದ ಕಾರ್ಯಕರ್ತರನ್ನು ಮತ್ತೊಮ್ಮೆ ನೆನೆಪಿಸಿಕೊಳ್ಳುವ ಕೆಲಸ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಬಾಚಕೆರೆ, ವಿಶ್ವ ಹಿಂದೂ ಪರಿಷದ್ ಜಿಲ್ಲಾ ಅಧ್ಯಕ್ಷ ಡಾ.ಕೃಷ್ಣಪ್ರಸನ್ನ ಪುತ್ತೂರು, ಬಜರಂಗದಳದ ಜಿಲ್ಲಾ ಸಂಯೋಜಕ್ ಭರತ್ ಕುಮ್ಡೇಲ್, ಗುರುರಾಜ್ ಬಂಟ್ವಾಳ್, ಸಂತೋಷ್ ಸರಪಾಡಿ, ಬಂಟ್ವಾಳ ಪ್ರಖಂಡ ಅಧ್ಯಕ್ಷ ಪ್ರಸಾದ್ ಕುಮಾರ್ ರೈ, ಬಜರಂಗದಳದ ಪ್ರಖಂಡ ಸಂಯೋಜಕ್ ಶಿವಪ್ರಸಾದ್ ತುಂಬೆ, ಕಿರಣ್ ಕಾಪಿಕಾಡ್, ಪ್ರಸಾದ್ ಬೆಂಜನಪದವು, ಚಂದ್ರ ಕಲಾಯಿ, ಸಂದೇಶ್ ಕಾಡಬೆಟ್ಟು, ಪ್ರವೀಣ್ ಕುಂಟಾಲಪಲ್ಕೆ, ಬಂಟ್ವಾಳ ವಿಧಾನಸಭಾ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಭೇಟಿ ನೀಡಿ ಶುಭ ಹಾರೈಸಿದರು. ಹಾಗೂ ಸರಪಾಡಿ ಖಂಡ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top