ಸ್ಯಾನ್ ಫ್ರಾನ್ಸಿಸ್ಕೋ : ಟ್ವಿಟರ್ ನ ಲೋಗೋ ಅಧಿಕೃತವಾಗಿ ಬದಲಾವಣೆಯಾಗಿದ್ದು, ಐಕಾನಿಕ್ ನೀಲಿ ಬಣ್ಣದ ಹಕ್ಕಿ ಮಾಯವಾಗಿ ಎಕ್ಸ್ ಲೋಗೋ ಕಾಣಿಸಿಕೊಳ್ಳುತ್ತಿದೆ.
ಟ್ವಿಟರ್ ನನ್ನು ಖರೀದಿಸಿರುವ ಎಲೋನ್ ಮಸ್ಕ್ ಅಪ್ಲಿಕೇಶನ್ ನ್ನು ರೀಬ್ಯಾಂಡ್ ಮಾಡುವ ಉದ್ದೇಶದಿಂದ ಲೋಗೋ ಹಾಗೂ ಹೆಸರನ್ನು ಬದಲಿಸಲು ಮುಂದಾಗಿದ್ದಾರೆ. ಎಲೋನ್ ಮಸ್ಕ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಟ್ವಿಟರ್ ನ ಪ್ರಧಾನ ಕಚೇರಿಯಲ್ಲಿ ಸೋಮವಾರ ಎಕ್ಸ್ ಬ್ರ್ಯಾಂಡಿಂಗ್ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ.
ಮಸ್ಕ್ ಟ್ವಿಟರ್ ನ ನೀಲಿ ಹಕ್ಕಿಗೆ ಗುಡ್ ಬೈ ಹೇಳುವ ಕುರಿತು ಟ್ವೀಟ್ ನಿಂದಾಗಿ ಅವರು ಆಪ್ ನ್ನು ರೀ ಬ್ರ್ಯಾಂಡ್ ಮಾಡಲು ಹೊರಟಿರುವುದು ದೃಢಪಟ್ಟಿತ್ತು. ಈ ಹಿಂದೆಯೇ ಟ್ವೀಟರ್ ಇಂಕ್ ನ್ನು ಎಕ್ಸ್ ಕ್ರಾಪ್ ನೊಂದಿಗೆ ವಿಲೀನ ಮಾಡಲಾಗಿದೆ. ಇದೀಗ ಟ್ವೀಟರ್ ನ ಲೋಗೋ ಬದಲಾಗಿದೆ. ಇನ್ನು ಮುಂದೆ ಎಕ್ಸ್ ಹೆಸರಿನಲ್ಲೇ ಮುಂದುವರಿಯಲಿದೆ ಎಂದು ತಿಳಿಸಿದೆ.