ಕುಲಾಲ ಸಮಾಜಸೇವಾ ಸಂಘದ ವತಿಯಿಂದ ಪ್ರಶಸ್ತಿ ಪ್ರದಾನ, ವಾರ್ಷಿಕ ಮಹಾಸಭೆ, ವಿದ್ಯಾರ್ಥಿ ವೇತನ ವಿತರಣೆ

ಪುತ್ತೂರು: ಪುತ್ತೂರು ಕುಲಾಲ ಸಮಾಜಸೇವಾ ಸಂಘದ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಪ್ರಶಸ್ತಿ ಪ್ರದಾನ ಸಮಾರಂಭ, ವಿದ್ಯಾರ್ಥಿ ವೇತನ ಹಾಗೂ ವಾರ್ಷಿಕ ಮಹಾಸಭೆ ಭಾನುವಾರ ನಗರದ ಪುರಭವನದಲ್ಲಿ ನಡೆಯಿತು.

ಕರ್ನಾಟಕ ರಾಜ್ಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ, ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಚಂದಪ್ಪ ಮೂಲ್ಯ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕುಲಾಲ ಸಂಘ ನಂಬಿಕೆ, ವಿಶ್ವಾಸ ದ್ರೋಹ, ದಬ್ಬಾಳಿಕೆ ಮಾಡದ ಸಮಾಜವಾಗಿದ್ದು, ಮುಂದಿನ ಪೀಳಿಗೆ ಹಿರಿಯರು ಸಮಾಜಕ್ಕೆ ಸಲ್ಲಿಸಿದ ಸೇವೆ, ಅಭಿವೃದ್ಧಿ ಕಾರ್ಯಗಳಿಂದ ಪ್ರೇರಣೆಗೊಂಡು ಮತ್ತಷ್ಟು ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸಮಾಜ ಬೆಳೆಯಬೇಕಾದರೆ ಸಮಾಜದಲ್ಲಿ ಒಗ್ಗಟ್ಟು ಮುಖ್ಯ. ಈ ನಿಟ್ಟಿನಲ್ಲಿ ಸಮಾಜಕ್ಕೆ ಶಕ್ತಿ ನೀಡುವ ಕೆಲಸ ಮಾಡಿ. ಸಮಾಜದ ಹಿಂದೆ ನಮ್ಮ ಸಹಕಾರ ಇದೆ ಎಂದರು.



































 
 

ಮುಖ್ಯ ಅತಿಥಿಯಾಗಿ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಮಾತನಾಡಿ, ಪ್ರಸ್ತುತ ಗೌರವಕ್ಕೆ ಪಾತ್ರವಾದ ಕುಲಾಲ ಸಮಾಜದ ಇತಿಹಾಸವನ್ನು ಮತ್ತೊಮ್ಮೆ ನೆನಪಿಸಬೇಕಾಗಿದೆ. ಇವೆಲ್ಲದಕ್ಕೆ ಇಂದು ಕುಲಾಲ ಸಮಾಜದ ವತಿಯಿಂದ ಮಂಗಳೂರಿನ ಕುಲಶೇಖರದಲ್ಲಿ ನಿರ್ಮಾಣಗೊಂಡ ಶ್ರೀ ವೀರನಾರಾಯಣ ದೇವಸ್ಥಾನ ಕಾರಣವಾಗಿದೆ. ಇದು ಸಮಾಜದ ನ್ಯೂನತೆಗೆ ಪರಿಹಾರ ಸೂಚಕವಾಗಿರಬೇಕು ಎಂದ ಅವರು, ಸಮಾಜದಲ್ಲಿನ ದೊಡ್ಡ ಸಮಸ್ಯೆ ವಧು-ವರರನ್ನು ಹುಡುಕುವುದು ಮತ್ತು ಜಗಗಣಪತಿ ಆಗದೇ ಇರುವುದು. ಈ ನಿಟ್ಟಿನಲ್ಲಿ ಜನಗಣತಿ ಸರಿಯಾಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ಸದ್ಯದಲ್ಲೇ ಅಂಕಿ ಅಂಶವನ್ನು ಸರಕಾರಕ್ಕೆ ಸಲ್ಲಿಸಲಿದ್ದೇವೆ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಮಂಗಳೂರು ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಘದ ಹಿರಿಯರಾದ ಬಿ.ಎಸ್.ಕುಲಾಲ್, ಚಲನಚಿತ್ರ ನಟ ಮನೋಜ್ ಕುಲಾಲ್, ವಿಟ್ಲ ಸಂಘದ ಅಧ್ಯಕ್ಷ ಬಿ.ಕೆ.ಬಾಬು, ಬೆಳ್ಲಾರೆಯ ಶೈಲೇಶ್ ನೆಟ್ಟಾರು, ರಾಮಕುಂಜದ ಮೋನಪ್ಪ ಕುಲಾಲ್ ಬೊಳ್ಳರೋಡಿ, ಪಾಣಾಜೆಯ ದಿವಾಕರ ಕುಲಾಲ್, ಕೌಡಿಚ್ಚಾರಿನ ಬಾಲಕೃಷ್ಣ ಕೌಡಿಚ್ಚಾರ್, ಕೆಯ್ಯೂರಿನ ಹೊನ್ನಪ್ಪ ಮೂಲ್ಯ, ಆರ್ಯಾಪಿನ ಶೀನಪ್ಪ ಕುಂಬಾರ, ಚಾರ್ವಾಕ ಕೊಪ್ಪ ಕೆಳಗಿನಕೇರಿ ಶಿರಾಡಿ ರಾಜನ್ ದೈವಸ್ಥಾನದ ಮೊಕ್ತೇಸರ ವಸಂತ ಕುಂಬಾರ ಉಪಸ್ಥಿತರಿದ್ದರು.

ಪುತ್ತೂರು ಕುಲಾಲ ಸಮಾಜಸೇವಾ ಸಂಘದ ಅಧ್ಯಕ್ಷ ನವೀನ್ ಕುಲಾಲ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷ ಮಯೂರ್ ಉಳ್ಳಾಲ್ ಅವರಿಗೆ ಕುಲಾಲ ಕುಲತಿಲಕ ಪ್ರಶಸ್ತಿ ಹಾಗೂ ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್ ಅವರಿಗೆ ಕುಲಾಲ ಕುಲಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಗ್ನಿಶಾಮಕ ನಿವೃತ್ತ ಠಾಣಾಧಿಕಾರಿ ಎಂ.ಗೋಪಾಲ್ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ “ಬೊಲ್ಪು” ಕಿರುಚಿತ್ರದ ಪೋಸ್ಟರನ್ನು ಚಲನಚಿತ್ರ ನಟ ಮನೋಜ್ ಕುಲಾಲ್ ಬಿಡುಗಡೆ ಮಾಡಿದರು. ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು.

ಸಂಘದ ಕಾರ್ಯದರ್ಶಿ ಜನಾರ್ದನ ಮೂಲ್ಯ ಸಾರ್ಯ ಸ್ವಾಗತಿಸಿದರು. ಪ್ರವೀಣ್ ಮೂಡುಶೆಡ್ಡೆ ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಸಂಘದ ವಾರ್ಷಿಕ ಮಹಾಸಭೆ ನಡೆಯಿತು. ಬೆಳಿಗ್ಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಂಘದ ಕಚೇರಿಯಲ್ಲಿ ನಡೆಯಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top