ಚಿಕಿತ್ಸಾ ವೆಚ್ಚಕ್ಕಾಗಿ ಸಹೃದಯಿಗಳು ಸಹಾಯ ಹಸ್ತ ಮಾಡುವಂತೆ ಮನವಿ

ಪುತ್ತೂರು: ಬೈಕ್-ಲಾರಿ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪುತ್ತೂರು ತಾಲೂಕಿನ ಬೆಳ್ಳಿಪಾಡಿ ಗ್ರಾಮದ ಕೂಟೇಲು ನಿವಾಸಿ ಮನೋಹರ (24) ಚಿಕಿತ್ಸಾ ವೆಚ್ಚಕ್ಕಾಗಿ ಸಹಾಯ ಹಸ್ತಕ್ಕಾಗಿ ಕೈಚಾಚಿದ್ದಾರೆ.

ಕೂಟೇಲು ನೀಲಪ್ಪ ಗೌಡ ಮತ್ತು ಯಮುನಾ ದಂಪತಿ ಪುತ್ರನಾದ ಮನೋಹರ ಅವರಿಗೆ ಅಪಘಾತದಿಂದ ಮುಖ, ಕಾಲು, ಹೊಟ್ಟೆಗೆ ದೊಡ್ಡ ಮಟ್ಟದ ಗಾಯವಾಗಿದ್ದು, ಈಗಾಗಲೇ ಕಾಲು ಸರ್ಜರಿ ಮಾಡಲಾಗಿದ್ದು, ಎಂಟು ಲಕ್ಷಕ್ಕೂ ಅಧಿಕ ಖರ್ಚಾಗಿದೆ. ಹೊಟ್ಟೆ ಭಾಗ ಸರ್ಜರಿ ಮಾಡಲು ಇನ್ನೂ 7 ಲಕ್ಷ ರೂಪಾಯಿಯ ಅಗತ್ಯವಿದ್ದು, ಬಡ ಕುಟುಂಬ ಆಗಿರುವುದರಿಂದ ವೈದ್ಯಕೀಯ ವೆಚ್ಚ ಭರಿಸಲು ಕಷ್ಟವಾಗಿದೆ.

ಸಹೃದಯಿಗಳು ತಮ್ಮ ಕೈಲಾದ ಸಹಾಯ ಮಾಡುವಂತೆ ಕುಟುಂಬ ವಿನಂತಿಸಿದೆ.



































 
 

ಸಹಾಯ ಹಸ್ತ ನೀಡುವವರು ಗೂಗಲ್ ಪೇ/ಫೋನ್ ಪೇ ನಂಬರ್ 9535720622 ಅಥವಾ ಯೂನಿಯನ್ ಬ್ಯಾಂಕ್, ಖಾತೆ ನಂ : 022422010000025, ಐಎಫ್ ಎಸ್ ಸಿ ಕೋಡ್ : UBIN0902241  ಜಮೆ ಮಾಡಬಹುದು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top