ಗ್ರಾಮ ಪಂಚಾಯಿತಿ ಉಪಚುನಾವಣೆ | ಗ್ರಾಪಂ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧ

ಮಂಗಳೂರು : ಗ್ರಾಮ ಪಂಚಾಯತ್ ಉಪ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆ ನಡೆಯುವ ಗ್ರಾಪಂನ 3 ಕಿ.ಮೀ. ವ್ಯಾಪ್ತಿಯಲ್ಲಿ ಮದ್ಯಮುಕ್ತ ದಿನ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಪುತ್ತೂರು ತಾಲೂಕಿನ ನಿಡ್ಪಳ್ಳಿ, ಆರ್ಯಾಪು, ಬಂಟ್ವಾಳ ತಾಲೂಕಿನ ಪುದು, ಬೆಳ್ತಂಗಡಿ ತಾಲೂಕಿನ ಉಜಿರೆ ಹಾಗೂ ಮಡಂತ್ಯಾರು ಗ್ರಾಪಂಗಳಲ್ಲಿ ಚುನಾವಣೆ/ಉಪಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಜು.21 ರ ಸಂಜೆ 5 ಗಂಟೆಯಿಂದ ಚುನಾವಣೆ ಮುಕ್ತವಾಗುವ ವರೆಗೆ ನಿಷೇಧಿಸಲಾಗಿದೆ.

ಎಲ್ಲಾ ವಿವಿಧ ಮದ್ಯದಂಗಡಿ, ಮದ್ಯ ಮಾರಾಟ ಪರವಾನಿಗೆ ಇರುವ ಅಂಗಡಿಗಳನ್ನು ಹಾಗೂ ಮಾರಾಟ ಕೇಂದ್ರಗಳಾದ ಹೊಟೇಲ್‍ಗಳಲ್ಲಿ ನಿಷೇಧಿಸಲಾಗಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top