ಬೆಂಗಳೂರು: 2023 – 24ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅಡಿ ಅಡಿಕೆ, ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ಇಂದಿನಿಂದ ಅವಕಾಶ ಕಲ್ಪಿಸಿದ್ದು ಜು.31 ರ ತನಕ ರೈತರು ವಿಮೆ ಕಂತನ್ನು ಪಾವತಿಸಲು ಅವಕಾಶ ಕಲ್ಪಿಸಲಾಗಿದೆ.
ಆದ್ದರಿಂದ ಎಲ್ಲಾ ರೈತ ಬಾಂಧವರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿಕೊಳ್ಳಲು ಈ ಮೂಲಕ ತಿಳಿಸಲಾಗಿರುತ್ತದೆ. ಸಮಯದ ಅಭಾವವಿರುವುದರಿಂದ ರೈತರು ತಮ್ಮ ತಮ್ಮಲ್ಲಿಯೇ ಹೆಚ್ಚಿನ ಪ್ರಚಾರ ಕೈಗೊಂಡು ತಮ್ಮ ತಮ್ಮಲ್ಲಿನ ರೈತರ ವಾಟ್ಸಾಪ್ ಗುಂಪುಗಳಿಗೆ ಈ ಸಂದೇಶವನ್ನು ರವಾನಿಸಬೇಕಾಗಿ ತಿಳಿಸಲಾಗಿದೆ.
ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕಾರ್ಯ ರೂಪಕ್ಕೆ ಬಂದು 5 ವರ್ಷಗಳು ಸಂದಿದ್ದು, ಇಷ್ಟೂ ವರ್ಷಗಲಲ್ಲಿ ಜೂನ್ ತಿಂಗಳ ಆರಂಭದ ದಿನದಿಂದ ಜೂನ್ ತಿಂಗಳ ಅಂತ್ಯದವರೆಗೆ ಪ್ರೀಮಿಯಂ ಪಾವತಿಗೆ ಕಲ್ಪಿಸಿ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆದರೇ ಈ ಬಾರಿ ಜುಲೈ ತಿಂಗಳ ಮಧ್ಯ ಭಾಗದವರೆಗೆ ಸರಕಾರ ಯಾವುದೇ ಅಧಿಸೂಚನೆ ಹೊರಡಿಸಿರಲಿಲ್ಲ. ಆದರೇ ಜೂನ್ ತಿಂಗಳಿನಲ್ಲಿ ಭತ್ತದ ಬೆಳೆ ಫಸಲ್ ಭಿಮಾ ಯೋಜನೆಯಡಿ ವಿಮಾ ಕಂತು ಪಾವತಿಸಲು ಸರಕಾರ ಆದೇಶ ಹೊರಡಿಸಿತ್ತು. ಇದರಿಂದ ಸಹಜವಾಗಿಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಟ ಪ್ರಮಾಣದಲ್ಲಿರುವ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು.