ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ತ್ರಿಶೂಲ್ ಗೌಡರವರು ಅವರು ಸೆಪ್ಟೆಂಬರ್ 13 ರಿಂದ 17 ರವರೆಗೆ ಕೆನಡಾದ ಒಂಟಾರಿಯೊದ ವಿಂಡ್ಸರ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್ 2023 ರಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
2023 ರ ಜೂನ್ 8 ರಿಂದ 11 ರವರೆಗೆ ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲುರುವ ರೇ ಸೆಂಟರ್‌ನಲ್ಲಿ ನಡೆದ 18 ನೇ ರಾಷ್ಟ್ರೀಯ ಪೂಲ್ ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ 9ರಿಂದ 11 ಜುಲೈ 2023 ರ ಶಿಬಿರದಲ್ಲಿ ಅವರು ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತೀಯ ಕಾಮನ್‌ವೆಲ್ತ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಈ ಪಂದ್ಯಾವಳಿಗಳಲ್ಲಿ ತ್ರಿಶೂಲ್ ಗೌಡರವರು ಎರಡು ಚಿನ್ನದ ಪದಕಗಳನ್ನು ಗಳಿಸಿರುತ್ತಾರೆ, ಅವರಿಗೆ ಪುತ್ತೂರು ಅಕ್ವಾಟಿಕ್ ಕ್ಲಬ್‌ನ ಪಾರ್ಥ ವಾರಣಾಶಿ, ರೋಹಿತ್ ಪ್ರಕಾಶ್ ಮತ್ತು ನಿರೂಪ್ ಜಿ ಆರ್, ಹಾಗೂ ವಿ ಸ್ವಿಮ್ ಅಕಾಡೆಮಿಯ ಸೀತಾರಾಮ ಗೌಡ ಇವರುಗಳು ತರಬೇತಿ ನೀಡಿರುತ್ತಾರೆ.
ಅವರ ಆಯ್ಕೆಯ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆಂಟೊನಿ ಪ್ರಕಾಶ್ ಮೊಂತೆರೋ ಶುಭ ಹಾರೈಸಿದ್ದಾರೆ.
ಹೆತ್ತವರ ತ್ಯಾಗ, ಪ್ರಾಂಶುಪಾಲರ ನಿರಂತರ ಬೆಂಬಲ, ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನ ಹಾಗೂ ಸಹಪಾಠಿ ಸ್ನೇಹಿತರ ಸಹಕಾರ, ನನ್ನಿಂದ ಮರೆಯಲಸಾಧ್ಯ.
ಸಂತ ಫಿಲೋಮಿನಾ ಕಾಲೇಜಿನಲ್ಲಿ ಕ್ರೀಡಾಪಟುಗಳಿಗೆ ಬಹಳಷ್ಟು ಪ್ರೋತ್ಸಾಹ ನೀಡಲಾಗುತ್ತಿದೆ. ನನ್ನ ಕ್ರೀಡಾ ಪಯಣದುದ್ದಕ್ಕೂ ನನ್ನ ಕಾಲೇಜಿನಿಂದ ನಾನು ಪಡೆದ ಅಚಲ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ನಾನು ಚಿರಋಣಿ. ಕಾಲೇಜಿನಲ್ಲಿ ಶೈಕ್ಷಣಿಕ ಉತ್ಕೃಷ್ಟತೆಗೆ ಆದ್ಯತೆ ನೀಡುವುದು ಮಾತ್ರವಲ್ಲದೆ ಕ್ರೀಡೆ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಪ್ರತಿಭೆಯನ್ನು ಪ್ರೋತ್ಸಾಹಿಸಲಾಗುತ್ತದೆ . ನನ್ನ ಕಾಲೇಜಿನಲ್ಲಿನ ಅಧ್ಯಾಪಕರು ಮತ್ತು ಸಿಬ್ಬಂದಿ ಯಾವಾಗಲೂ ಅರ್ಥಮಾಡಿಕೊಳ್ಳುತ್ತಾರೆ , ನನ್ನ ಅಧ್ಯಯನ ಮತ್ತು ತರಬೇತಿಯ ನಡುವೆ ಸಮತೋಲನವನ್ನು ಸಾಧಿಸಲು ನನಗೆ ಅವಕಾಶ ಮಾಡಿಕೊಡುತ್ತಾರೆ. ಕ್ರೀಡಾ ತರಬೇತುದಾರರು ನನ್ನ ಶಕ್ತಿಯ ಆಧಾರ ಸ್ತಂಭಗಳಾಗಿದ್ದು, ನನ್ನನ್ನು ಪ್ರೀತಿಯಿಂದ ತಿದ್ದಿ ಶಿಸ್ತಿನ ಜೀವನ ನಡೆಸಿ ಕ್ರೀಡೆಯಲ್ಲಿ ಇನ್ನಷ್ಟು ಎತ್ತರವನ್ನು ತಲುಪಲು ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ. ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತ ಹೆತ್ತವರ ತ್ಯಾಗ, ಪ್ರಾಂಶುಪಾಲರ ನಿರಂತರ ಬೆಂಬಲ, ದೈಹಿಕ ಶಿಕ್ಷಣ ನಿರ್ದೇಶಕರ ಮಾರ್ಗದರ್ಶನ ಹಾಗೂ ಸಹಪಾಠಿ ಸ್ನೇಹಿತರ ಸಹಕಾರ, ನನ್ನಿಂದ ಮರೆಯಲುಸಾಧ್ಯ.