ಸೌಜನ್ಯ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಅಂತ ಹೇಳಿದ್ದೇ ನಾನು | ಧರ್ಮಸ್ಥಳದ ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಹೇಳಿದ ಡಾ. ಡಿ.ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ : ಸೌಜನ್ಯ ಕೊಲೆ ಪ್ರಕರಣದ ಕುರಿತು ತನಿಖೆ ಮಾಡಲು ಸರಕಾರಕ್ಕೆ ಮೊದಲು ಪತ್ರ ಬರೆದಿದ್ದೇ ನಾನು, ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ ಅಂತ ಹೇಳಿದ್ದೇ ನಾನು. ಮತ್ತಷ್ಟು ತನಿಖೆ ಮಾಡಲಿ, ಸಂಶೋಧನೆ ಮಾಡಲಿ. ಅದರಿಂದ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.

ಅವರು ಧರ್ಮಸ್ಥಳದ  ವಿಭಾಗೀಯ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು.

ಕ್ಷೇತ್ರದಲ್ಲಿ 60 ವರ್ಷಗಳಲ್ಲಿ ಬಹಳ ಬದಲಾವಣೆ ಆಗಿದೆ, ಹಲವು ಸೇವೆ ಮಾಡಿಕೊಂಡು ಬಂದಿದ್ದೇವೆ. ಒಳ್ಳೆಯ ಕೆಲಸ ಅನ್ನೋದು ಎರಡು ರೀತಿಯ ಕತ್ತಿ ಇದ್ದ ಹಾಗೆ. ಅದು ಎರಡೂ ಕಡೆಯಿಂದ ಕೊಯ್ತದೆ, ಪ್ರಚಾರದ ದೃಷ್ಟಿಯಲ್ಲಿ ಒಳ್ಳೆಯದು ಹಾಗೂ ದ್ವೇಷ ಕೂಡ ಉಂಟು ಮಾಡ್ತಾದೆ































 
 

ನಮಗೆ ಕೋಟ್ಯಾಂತರ ಅಭಿಮಾನಿಗಳ ಬಳಗ ಇದೆ, ಇದರಲ್ಲಿ ಕೆಲವರಿಗೆ ದ್ವೇಷ ಆಗಿದೆ. ಇದಕ್ಕೆ ದ್ವೇಷ, ಅಸೂಯೆ ಕಾರಣ, ಧರ್ಮಸ್ಥಳದ ಹೆಸರಲ್ಲಿ ಒಳ್ಳೆಯ ಕೆಲಸ ಆಗ್ತಿದೆ ಅಂತ. ಕ್ಷೇತ್ರದ ಸಂಪತ್ತನ್ನ ಹೇಗೆ ಬಳಸ್ತೀವಿ ಅನ್ನೋದ್ರ ಮೇಲೆ ಅದರ ಪರಿಣಾಮ ಇದೆ. ಈಗ ಅವರು ಮಾತನಾಡುವ ವಿಷಯಗಳು ನಮಗೆ ಸಂಬಂಧವೇ ಇಲ್ಲ. ಇದರ ಹಿಂದೆ ಅಮಾಯಕ ಹುಡುಗಿಯ ಸಾವಿನ ವಿಚಾರ ಇಲ್ಲ, ಕ್ಷೇತ್ರದ ವಿಚಾರ ಇದೆ. ನನಗೆ ಯಾವುದೇ ಭಯ, ಸಂಕೋಚ ಹಾಗೂ ಸಂದೇಹ ಇಲ್ಲ. ಶತೃತ್ವಕ್ಕೆ ಕಾರಣ ಏನು ಅನ್ನೋದೇ ನಮಗೆ ಇರೋ ಸಮಸ್ಯೆ. ಹಾಗಾಗಿ ನಮ್ಮ ಸಿಬ್ಬಂದಿಗಳಿಗೆ ಈ ಸತ್ಯ ಗೊತ್ತಿರಬಹುದು, ನಾವು ಯಾಕೆ ಸುಮ್ಮನಿದ್ದೇವೆ ಅಂತ ಅನಿಸಬಾರದು. ನಾವು ಸುಮ್ಮನಿರೋದು ಸಂಭಾಷಣೆ ಆರಂಭವಾಗಬಾರದು ಅಂತ. ಅನೇಕರು ಬಂದು ಕಣ್ಣೀರು ಹಾಕ್ತಾ ಇದಾರೆ, ನಿಮಗೆ ಹೀಗಾದರೆ ಹೇಗೆ ತಡೆಯೋದು ಅಂತ ಆದರೆ ಈಗ ಪ್ರೀತಿ ಮತ್ತು ದ್ವೇಷ ಯಾರಿಗಿದೆ ಅಂತ ಗೊತ್ತಾಗ್ತಿದೆ. ನಮ್ಮ ಆತ್ಮ ಮತ್ತು ವ್ಯವಹಾರ ಎಲ್ಲವೂ ಸ್ವಚ್ಛವಾಗಿದೆ. ಗುಬ್ಬಿಗೆ ಬ್ರಹ್ಮಾಸ್ತ್ರ ಬಿಡುವ ಅಗತ್ಯವೇ ಇಲ್ಲ. ನೀವೆಲ್ಲಾ ನಿಮ್ಮ ಸಿಬ್ಬಂದಿ ಕರೆದು ಈ ಬಗ್ಗೆ ಗಟ್ಟಿಯಾಗಿ ಹೇಳಿ. ಧರ್ಮಸ್ಥಳದ ಸಿಬ್ಬಂದಿ ಕಾರಣಕ್ಕೆ ಇಲ್ಲಿ ಎಲ್ಲವೂ ಚೆನ್ನಾಗಿದೆ. ನಮ್ಮ ಒಳ್ಳೆಯ ಕಾರ್ಯಗಳು‌ ನಡೆಯುತ್ತೆ, ಇದು ಮಧ್ಯದಲ್ಲಿ ಬಂದ ಮೋಡವಷ್ಟೇ. ಈ ಪರದೆ ತೆಗೀಬೇಕು, ಅದನ್ನ ದೇವರು ತೆಗೀತಾನೆ. ನಿಮ್ಮ ಶಿಸ್ತು ಮತ್ತು ನಿಯಮ ಬಿಡಬೇಡಿ, ನನಗೆ ಯಾವ ಭಯವೂ ಇಲ್ಲ. ನಾವು ಯಾರಿಗೂ ಯಾವ ಅನ್ಯಾಯಕ್ಕೂ ಸಹಕಾರ ಕೊಡಲ್ಲ ವೈಯಕ್ತಿತ ಅವಮಾನ ಮತ್ತು ವೈಯಕ್ತಿಕ ಸಂಭಾಷಣೆ ಸರಿಯಲ್ಲ ಎಂದು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top