ಪುತ್ತೂರು: ಕೇಂದ್ರ ಸರಕಾರದ 10000 ರೈತ ಉತ್ಪಾದಕ ಸಂಸ್ಥೆಗಳ ರಚನೆ ಮತ್ತು ಉತ್ತೇಜನ ಯೋಜನೆ ಅಡಿಯಲ್ಲಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ಸ್ಥಾಪನೆಗೊಂಡ ಜನನಿ ರೈತ ಉತ್ಪಾದಕ ಕಂಪನಿ ನಿಯಮಿತ ಪುತ್ತೂರು ಪ್ರಸ್ತುತ ನೆಯ್ತಾಡಿ ಕಮ್ಮಿಂಜೆಯಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ವ್ಯವಹಾರ ಪ್ರಕ್ರಿಯೆ ನಡೆಸಿಕೊಂಡು ಬಂದಿದೆ.

ಕಂಪನಿಯು ಪುತ್ತೂರು ತಾಲೂಕಿನ 9 ಗ್ರಾಮಗಳನ್ನು ಕೇಂದ್ರವಾಗಿರಿಸಿ ಪ್ರತಿ ಗ್ರಾಮಗಳಿಂದ ನಿರ್ದೇಶಕರನ್ನೊಳಗೊಂಡು, ಸುಮಾರು 500 ರೈತ ಸದಸ್ಯತ್ವ ಹೊಂದಿ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ಸಂಸ್ಥೆಯಲ್ಲಿ ರೈತರಿಗೆ ರಾಸಾಯನಿಕ ರಸಗೊಬ್ಬರಗಳು, ಸಾವಯವ ಗೊಬ್ಬರಗಳು, ಸೋಲಾರ್ ಟಾರ್ಪಲ್, ಕೀಟನಾಶಕಗಳು,ಹಾಗೂ ಇನ್ನಿತರ ಕೃಷಿ ಉಪಕಾರಣಗಳು ರಿಯಾಯಿತಿ ದರಗಳಲ್ಲಿ ಲಭ್ಯವಿದೆ. ಕಂಪನಿಯ ಸದಸ್ಯ ರೈತರಿಗೆ ವಿಶೇಷ ರಿಯಾಯಿತಿ ದರಗಳಲ್ಲಿ ಕೃಷಿ ಸೇವೆಯನ್ನು ಒದಗಿಸುತ್ತದೆ.

ನಬಾರ್ಡ್ ಮೂಲಕ ಕೃಷಿ ಕಾರ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮೂಡಬಿದರೆ ಹಾಗೂ ಪುತ್ತೂರಿನಲ್ಲಿ ಈ ಕಂಪೆನಿ ಕಾರ್ಯನಿರ್ವ ಹಿಸುತ್ತಿದೆ. 10 ಗ್ರಾಮಗಳಿಗೆ ಸಂಬಂಧಿಸಿದ ಸುಮಾರು 400 ಮಂದಿ ರೈತರು ಇದರ ಸದಸ್ಯರಾಗಿರುತ್ತಾರೆ. ಕೇಂದ್ರ ಸರಕಾರ ಕೃಷಿ ಸಂಬಂಧಿತ ಸೇವೆಗಳನ್ನು ನಬಾರ್ಡ್ ಮೂಲಕ ರೈತರಿಗೆ ತಲುಪಿಸುವುದೇ ಪ್ರಮುಖ ಗುರಿಯಾಗಿದೆ, ಮುಂದಿನ ದಿನಗಳಲ್ಲಿ ಈ ಯೋಜನೆಯ ಕುರಿತ ಮಾಹಿತಿ ಕಾರ್ಯಾಗಾರ ನಡೆಸುವುದಲ್ಲದೆ ಸಂಸ್ಥೆಯ ಮೂಲಕ ರಾಸಾಯನಿಕ ಗೊಬ್ಬರ ಮತ್ತು ಕೀಟ ನಾಶಕ ಮಳಿಗೆಯನ್ನು ತೆರೆಯಲಾಗುತ್ತಿದ್ದು ಶೀಘ್ರದಲ್ಲಿ ಉದ್ಘಾಟನೆಗೊಂಡು ರೈತರಿಗೆ ಸೇವೆ ನೀಡಲಾಗುವುದು.
ಗ್ರಾಹಕರು ಸಂಪರ್ಕಿಸಬೇಕಾದ ವಿಳಾಸ : ಜನನಿ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್, ಡೋರ್ ನಂ : 2-94 ಹೆಚ್, ಕಲ್ಲಗುಡ್ಡೆ, ಕೆಮ್ಮಿಂಜೆ ಗ್ರಾಮ, ಮುಂಡೂರು ಅಂಚೆ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ -574202
ದೂರವಾಣಿ : 9980266678, 6362569308