ಪುತ್ತೂರು: ಅಂಗನವಾಡಿಗಳಿಗೆ ಪೂರೈಕೆಯಾಗಿರುವ ಮೊಟ್ಟೆಗಳ ಪೈಕಿ ಇದೀಗ ಪುತ್ತೂರು ತಾಲೂಕಿನ ಭಕ್ತಕೋಡಿ ಅಂಗನವಾಡಿ ಕೇಂದ್ರಕ್ಕೆ ಕೊಳೆತ ಮೊಟ್ಟೆ ಪೂರೈಕೆಯಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಮೊಟ್ಟೆಗಳು ಪೂರೈಕೆಯಾಗುತ್ತಿರುವ ಕುರಿತು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧೀ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈಗಾಗಲೇ ತನಿಕೆಗೆ ಆದೇಶಿಸಿದ್ದಾರೆ. ತನಿಖಾ ವರದಿ ಸಲ್ಲಿಕೆಯಾದ ಬಳಿಕ ಕ್ರಮ ಜರಗಿಸಲಾಗುವುದು ಎಂದು ಅವರು ಈಗಾಗಲೇ ತಿಳಿಸಿದ್ದಾರೆ.
ಭಕ್ತಕೋಡಿ ಅಂಗನವಾಡಿಗ ಕೊಳೆತ ಮೊಟ್ಟೆ ಪೂರೈಕೆಯಾಗಿರುವ ಕುರಿತು ಸಿಡಿಪಿಒ ಪ್ರತಿಕ್ರಿಯೆ ನೀಡಿದ್ದು, ಪೂರೈಕೆಯಾಗಿರುವುದು ನಿಜ. ಕುರಿತು ಸಂಬಂಧಪಟ್ಟವರಿಗೆ ಬರೆದುಕೊಂಡಿದ್ದೇನೆ. ಈ ಹಿಂದೆ ಸ್ಥಳೀಯವಾಗಿ ಮೊಟ್ಟೆ ಖರೀದಿಯಿಂದ ಸಮಸ್ಯೆ ಬರಲಿಲ್ಲ. ಇದೀಗ ಕೊಳೆತ ಮೊಟ್ಟೆ ಪೂರೈಕೆಯಾಗಿರುವುದಕ್ಕೆ ಹಲವು ಕಾರಣಗಳು ಇರಬಹುದು ಎಂದು ತಿಳಿಸಿದ್ದಾರೆ.
























