ಇನ್ನು ಮುಂದೆ ದೇವಾಲಯಗಳಲ್ಲಿ ಫೋಟೊ ಕ್ಲಿಕ್ಕಿಸುವುದಕ್ಕೆ ನಿಷೇಧ | ಸರಕಾರದಿಂದ ಆದೇಶ

ಪುತ್ತೂರು: ದೇವಾಲಯಗಳಿಗೆ ತೆರಳಿ ಪೋಟೋ ಕ್ಲಿಕ್ಕಿಸಲೆಂದೇ ತೆರಳುವವರಿಗೆ ರಾಜ್ಯ ಸರ್ಕಾರ ಶಾಕಿಂಗ್​ ನ್ಯೂಸ್​ ನೀಡಿದೆ. ಕರ್ನಾಟಕದ ದೇಗುಲಗಳಲ್ಲಿ ಮೊಬೈಲ್​ ಬಳಕೆಗೆ ನಿಷೇಧ ಹೇರಿ ನೂತನ ಆದೇಶ ಹೊರಡಿಸಿದೆ.

ಇಂದು ಹಿಂದೂ ಧಾರ್ಮಿಕ ಹಾಗೂ ಧರ್ಮದಾಯ ದತ್ತಿಗಳ ಇಲಾಖೆ ಈ ಆದೇಶವನ್ನು ಹೊರಡಿಸಿದ್ದು ದತ್ತಿ ಇಲಾಖೆಗಳ ಅಡಿಯಲ್ಲಿ ಬರುವ ಯಾವುದೇ ದೇಗುಲಗಳಲ್ಲಿ ಇನ್ಮೇಲೆ ಮೊಬೈಲ್​ ಬಳಕೆ ಮಾಡುವಂತಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ರಾಜ್ಯ ಸರ್ಕಾರ 30 ಸಾವಿರಕ್ಕೂ ಅಧಿಕ ದೇವಾಲಯಗಳು ಇರುತ್ತದೆ. ಈಗಾಗಲೇ ದತ್ತಿ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ದೇಗುಲಗಳಿಗೆ ಮೊಬೈಲ್​ ಬಳಕೆ ಮಾಡದಂತೆ ಫಲಕಗಳನ್ನು ಅಳವಡಿಸಲಾಗಿದೆಯಾದರೂ ಸಹ ಅದನ್ನು ಯಾರೂ ಪಾಲಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಈ ಆದೇಶ ಹೊರಬಿದ್ದಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top