ಪುತ್ತೂರು: ಪರ್ಲಡ್ಕ ಅಂಗನವಾಡಿ ಗೇಟ್ ಬಳಿ ಮಣ್ಣು ರಾಶಿ ಹಾಕಿ ತಿಂಗಳು ಕಳೆದರೂ , ಸಂಬಂಧಪಟ್ಟ ಇಲಾಖೆಗಳಿಗೆ , ನಗರಸಭೆಗೆ ತಿಳಿಸಿದರೂ ತೆರವುಗೊಳಿಸದೇ ಇರುವುದರಿಂದ ಸಮಸ್ಯೆ ಉಂಟಾದ ಹಿನ್ನಲೆಯಲ್ಲಿ ಪುತ್ತಿಲ ಪರಿವಾರದ ವತಿಯಿಂದ ಶ್ರಮದಾನದ ಮೂಲಕ ಸಮಸ್ಯೆ ಪರಿಹರಿಸಲಾಯಿತು.

ಅಂಗನವಾಡಿ ವಿದ್ಯಾರ್ಥಿಗಳಿಗೆ ನಡೆಯಲಾರದಂತಹ ಸ್ಥಿತಿ ನಿರ್ಮಾಣವಾಗಿತ್ತು. ಶನಿವಾರ ಪುತ್ತಿಲ ಪರಿವಾರದ ವತಿಯಿಂದ ಶ್ರಮದಾನ ಮೂಲಕ ಮಣ್ಣು ಸಮತಟ್ಟುಗೊಳಿಸಲಾಯಿತು.
ಶ್ರಮದಾನದಲ್ಲಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ ಸುಧೀರ್ ಆಚಾರ್ಯ ಪ್ರವೀಣ್ ಭಂಡಾರಿ , ದೀಕ್ಷಿತ್ , ಅನ್ವಿತ್ ರೈ, ಅನಿಲ್ ತೆಂಕಿಲ, ಉಮೇಶ್ ಗೌಡ, ಸುದೀರ್ ರೈ, ಮನೀಷ್ , ಸನ್ಮಿತ್ ಮೊದಲಾದವರು ಶ್ರಮದಾನದಲ್ಲಿ ಭಾಗವಹಿಸಿದ್ದರು.