ಪುತ್ತೂರು: ಚುನಾವಣೆ ಸಂದರ್ಭ ನೀಡಿದ್ದ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮೂರು ಯೋಜನೆಗಳು ಮೂರೇ ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದ್ದು, ಕಾಂಗ್ರೆಸ್ ಸರಕಾರದ ಈ ಯೋಜನೆಯನ್ನು ಜನ ಒಪ್ಪಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಮುಂಬರುವ ಗ್ರಾಪಂ ಉಪ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನ್ನು ಬೆಂಬಲಿಸಲಿದ್ದಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಅವರು ಉಪಚುನಾವಣೆ ಅಂಗವಾಗಿ ನಿಡ್ಪಳ್ಳಿ ಹಾಗೂ ಆರ್ಯಾಪುನಲ್ಲಿ ನಡೆದ ಕಾರ್ಯಕರ್ತರು ಹಾಗೂ ಮತದಾರರ ಸಭೆಯಲ್ಲಿ ಮಾತನಾಡಿದರು.
ಕೆಪಿಸಿಸಿ ಸಂಯೋಜಕ ಹೇಮನಾಥ ಶೆಟ್ಟಿ ಕಾವು ಮಾತನಾಡಿ, ಶಾಸಕ ಅಶೋಕ್ ಕುಮಾರ್ ರೈ ಅವರು ಮೆಡಿಕಲ್ ಕಾಲೇಜು ಸಹಿತ ಇನ್ನಿತರ ಅಭಿವೃದ್ಧಿ ಕುರಿತು ನಿರಂತರ ಸರಕಾರದ ಗಮನಕ್ಕೆ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ ಎಂದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಹಿರಿಯ ಕಾಂಗ್ರೆಸ್ ಮುಖಂಡ ಮಹಾಬಲ ರೈ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಮಾಜಿ ಅಧ್ಯಕ್ಷ ಮುರಳಿಧರ್ ರೈ ಮಠಂತಬೆಟ್ಟು ಮಾತನಾಡಿದರು. ಕಾಂಗ್ರೆಸ್ ಮುಖಂಡರಾದ ಲ್ಯಾನ್ಸಿ ಮಸ್ಕರೇನಸ್, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಅಮಲರಾಮಚಂದ್ರ, ಶಕೂರ್ ಹಾಜಿ, ಜಯಪ್ರಕಾಶ್ ಬದಿನಾರ್, ಸಿದ್ದಿಕ್ ಸುಲ್ತಾನ್, ಆಲಿಕುಂಞ ಕೊರಿಂಗಿಲ, ರವೀಂದ್ರ ರೈ ನೆಕ್ಕಿಲು, ಮಹಾಲಿಂಗ ನಾಯ್ಕ, ಶಿವರಾಮ ಆಳ್ವ ಬಳ್ಳಮಜಲು, ಶಶಿಕಿರಣ್ ರೈ ನೂಜಿಬೈಲು, ನಿಡ್ನಳ್ಳಿ ಬೂತ್ ಅಧ್ಯಕ್ಷರಾದ ತಾರನಾಥ ನಾಯ್ಕ ಶೀನಪ್ಪಪೂಜಾರಿ, ಸತೀಶ್ ರ ಮುಂಡೂರು, ನಿಡ್ನಳ್ಳಿ ಗ್ರಾ.ಪಂ ಅಭ್ಯರ್ಥಿ ಸತೀಶ್ ರೈ ನೆಲ್ಲಿಕಟ್ಟೆ, ಗ್ರಾಪಂ ಸದಸ್ಯರಾದ ಗ್ರೇಟಾ, ತುಳಸಿ, ಅವಿನಾಶ್ ರೈ, ಬೆಟ್ಟಂಪಾಡಿ ಗ್ರಾಪಂ ಸದಸ್ಯ ಮೊಯಿದು, ಉಸ್ತುವಾರಿ ಬಾಲಚಂದ್ರ ರೈ ಆನಾಜೆ, ಮಾಜಿ ಗ್ರಾಪಂ ಸದಸ್ಯರಾದ ಲಕ್ಷ್ಮಣ ನಾಯ್ಕ, ಆಶಲತಾ, ವೆಂಕಪ್ಪ ನಾಯ್ಕ ಸುರೇಂದ್ರ ರೈ ಬಳ್ಳಮಜಲು, ಆಸಿಫ್ ತಂಬುತ್ತಡ್ಕ ಮತ್ತಿತರರು ಉಪಸ್ಥಿತರಿದ್ದರು.