ಪುತ್ತೂರು: ಖ್ಯಾತ ಸ್ಯಾಕ್ಸೋಫೋನ್ ವಾದಕ ಪುತ್ತೂರಿನ ಡಾ.ಪಿ.ಕೆ.ಗಣೇಶ್ ಅವರಿಗೆ ತಮಿಳುನಾಡಿನ ಮೈಲಾಡುತುರೈಯಲ್ಲಿರುವ ಧರ್ಮಪುರಂ ಅಧೀನಂ 27ನೇ ಮಹಾಸನ್ನಿಧಾನಂ ತಿರುಪ್ಪಾನಂದಲ್ ಕುಂಬಾಭಿಷೇಕದಲ್ಲಿ ಜು.7 ರಂದು ನಡೆದ ಸಂಗೀತ ಕಚೇರಿಯಲ್ಲಿ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇತಿಹಾಸದಲ್ಲೇ ಮೊದಲ ಬಾರಿಗೆ ತಮಿಳುನಾಡಿನ ಧರ್ಮಪುರಂ ಅಧೀನಂ (ಮಠ) ಸ್ಯಾಕ್ಸೋಫೋನ್ ಕ್ಷೇತ್ರಕ್ಕೆ ನೀಡಿದ ಪ್ರಶಸ್ತಿ ಹಾಗೂ ಚಿನ್ನದ ಪದಕ ಇದಾಗಿದ್ದು, ಚಿನ್ನದ ಪದಕ ಜತೆ ಕಲಾನಿಧಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಡಾ.ಪಿ.ಕೆ.ಗಣೇಶ್ ಅವರು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಧಾನ ಸ್ಯಾಕ್ಸೋಫೋನ್ ವಾದಕರಾಗಿದ್ದು, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.