ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನೂತನ ಅಧ್ಯಕ್ಷ, ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ರಾಜೇಶ್ ಬೆಜ್ಜಂಗಳ  ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಬೈಪಾಸ್ ರಸ್ತೆಯಲ್ಲಿರುವ ಆಶ್ಮಿ ಕಂಫಾರ್ಟ್ಸ್ ನಲ್ಲಿ ನಡೆಯಿತು.

ರೋಟರಿ ವಲಯ ಸೇನಾನಿ, ಕ್ಲಬ್ ಮಾಜಿ ಅಧ್ಯಕ್ಷ ನವೀನ್ ಚಂದ್ರ ನಾಯ್ಕ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ಕ್ಲಬ್ ನಿರ್ಗಮನ ಅಧ್ಯಕ್ಷ ರಫೀಕ್ ರವರ ತಂಡ ಉತ್ತಮ ಕಾರ್ಯಕ್ರಮಗಳನ್ನು ಸಮಾಜಕ್ಕೆ ನೀಡಿದ್ದಕ್ಕೆ ಅಭಿನಂದನೆ ಸಲ್ಲಿಸಬೇಕಾಗಿದೆ ಹಾಗೆಯೇ ಕ್ಲಬ್ ಚುಕ್ಕಾಣಿ ಹಿಡಿದ ನೂತನ ಅಧ್ಯಕ್ಷ ರಾಜೇಶ್ ಬೆಜ್ಜಂಗಳರವರಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಮುಂದುವರೆಸಿ ಕ್ಲಬ್ ಪ್ಲಾಟಿನಂ ಪ್ಲಸ್ ಪ್ರಶಸ್ತಿ ಬಾಚಿಕೊಳ್ಳಲಿ ಎಂದು ಶುಭ ಹಾರೈಸಿದರು.

ಕ್ಲಬ್ ನಿರ್ಗಮನ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಮಾತನಾಡಿ, ಪ್ರಶಸ್ತಿ ಎಂಬುದು ಇಹಲೋಕ ಹಾಗೂ ಪರಲೋಕದಲ್ಲಿ ಸಿಗಬೇಕು. ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೆ ಸಹಾಯಹಸ್ತ ನೀಡಿದಾಗ ಸಹಾಯಹಸ್ತ ಪಡೆದವರ ಪ್ರಾರ್ಥನೆ ನಮ್ಮ ರೋಟರಿ ಕುಟುಂಬಕ್ಕೆ ಸಿಗುತ್ತದೆ. ಪುತ್ತೂರಿನಲ್ಲಿ ಡಯಾಲಿಸಿಸ್ ರೋಗಿಗಳಿಗೆ ಬೇಕಾದ ಡಯಾಲಿಸಿಸ್ ಮೆಷಿನ್, ಕಣ್ಣಿನ ಆಸ್ಪತ್ರೆ ರೋಟರಿಯಿಂದ ಆಗಿರುವುದು ಆಸ್ತಿಯೆನಿಸಿದೆ. ಮಾತ್ರವಲ್ಲ ರೋಗಿಗಳ ಪಾಲಿಗೆ ರೋಟರಿ ಆಶಾಕಿರಣವಾಗಿದೆ ಎಂದರು.































 
 

ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಅಧ್ಯಕ್ಷ ಸುಂದರ ರೈ ಬಲ್ಕಾಡಿ ಮಾತನಾಡಿ, ಅಧ್ಯಕ್ಷ ಪದವಿಗೆ ಹಣ ಮುಖ್ಯವಲ್ಲ ಬದಲಾಗಿ ಮನಸ್ಸು ಮುಖ್ಯ. ಹಣವಿಲ್ಲದಿದ್ದರೂ ಅಧ್ಯಕ್ಷ ಹುದ್ದೆಯನ್ನು ಹೇಗೆ ನಿಭಾಯಿಸುವುದು ಎಂಬುದು ಇತರ ಸಂಘಟನೆಗಳಲ್ಲಿ ಅಧ್ಯಕ್ಷ ಹುದ್ದೆಯನ್ನು ನಿಭಾಯಿಸಿದ ಅನುಭವವಿದೆ ಎಂದರು.

ರೊಟರಿ ಕ್ಲಬ್ ಪುತ್ತೂರು ಸೆಂಟ್ರಲ್ ನೂತನ ಅಧ್ಯಕ್ಷ ಡಾ.ರಾಜೇಶ್‍ಬೆಜ್ಜಂಗಳ ಮಾತನಾಡಿ,  ಸಾಮಾನ್ಯ ಸದಸ್ಯನಾಗಿರಬೇಕು ಎಂಬ ದೃಢ ನಿರ್ಧಾರದಲ್ಲಿ ಇದ್ದವನು ಇಂದು ಅಧ್ಯಕ್ಷನಾದೆ. ಮಂಜೇಶ್ವರದವನಾದ ನನಗೆ ಪುತ್ತೂರಿನಲ್ಲಿ ಜೇಸಿಐ, ರೋಟರಿ ಸದಸ್ಯರೇ ನನ್ನ ಕುಟುಂಬವಾಗಿದೆ. ಕ್ಲಬ್ ಅಧ್ಯಕ್ಷನಾಗಿ ಸಮಾಜಮುಖಿ ಕಾರ್ಯಗಳ ಮೂಲಕ ಋಣ ತೀರಿಸುತ್ತೇನೆ ಎಂದು ನಂಬಿದ್ದೇನೆ. ನಮ್ಮ ಕ್ಲಬ್ ನಲ್ಲಿ ಅಧ್ಯಕ್ಷನಾದವರಿಗೆ ಯಾವುದೇ ಆರ್ಥಿಕ ಹೊರೆ ಆಗಬಾರದೆನ್ನುವ ದೃಷ್ಟಿಕೋನದಿಂದ ಎಲ್ಲರೂ ಸೇರಿಕೊಂಡು ಕ್ಲಬ್ ಮುನ್ನೆಡೆಸುವ ಎಂಬ ನಿರ್ಧಾರವು ನಮ್ಮಲ್ಲಿನ ಆತಂಕ ದೂರ ಮಾಡಿದೆ. ಇದರಿಂದ ರೋಟರಿಯಲ್ಲಿ ಮತ್ತಷ್ಟು ಕಾರ್ಯ ಮಾಡಲು ಸಾಧ್ಯವಾಗಿದ್ದು ಅಧ್ಯಕ್ಷ ಪದವಿಯನ್ನು ಪ್ರೀತಿಪೂರ್ವಕವಾಗಿ ಸ್ವೀಕರಿಸುತ್ತೇನೆ ಎಂದರು.

ನೂತನ ಸದಸ್ಯರ ಸೇರ್ಪಡೆ:

ಕ್ಲಬ್ ಸರ್ವಿಸ್ ನಡಿಯಲ್ಲಿ ಸರ್ವೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ನಮಿತಾ ನಾಯ್ಕ, ವಿವಿಧ ಕಂಪೆನಿಗಳಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಸೇವೆ ನೀಡುತ್ತಿರುವ ವಸಂತ್ ಶಂಕರ್ ರವರುಗಳನ್ನು ಪಿಡಿಜಿ ಡಾ.ಆರ್.ಎಸ್ ನಾಗಾರ್ಜುನರವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಅಧಿಕೃತವಾಗಿ ಬರಮಾಡಿಕೊಂಡರು.

ಸನ್ಮಾನ:

ಪ್ರಸೂತಿ ತಜ್ಞರಾಗಿ ಇಲ್ಲಿಯವರೆಗೆ ಸುಮಾರು ಮೂರು ಸಾವಿರಕ್ಕೂ ಮಿಕ್ಕಿ ಹೆರಿಗೆಯನ್ನು ಮಾಡಿಸಿದ ಇಲ್ಲಿನ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ.ಸುಬ್ರಾಯ ಭಟ್, ಕ್ಲಬ್ ಸ್ಥಾಪಕ ಅಧ್ಯಕ್ಷ ಸಂತೋಷ್ ಶೆಟ್ಟಿ, ನಿರ್ಗಮನ ಅಧ್ಯಕ್ಷ ಮೊಹಮದ್ ರಫೀಕ್, ಕಾರ್ಯದರ್ಶಿ ಚಂದ್ರಹಾಸ ರೈ ಬಿ, ಕೋಶಾಧಿಕಾರಿ ಡಾ.ರಾಮಚಂದ್ರ ಕೆ. ಅವರನ್ನು ಸನ್ಮಾನಿಸಲಾಯಿತು.

ವಿದ್ಯಾರ್ಥಿವೇತನ, ಅಭಿನಂದನೆ:

ಪುತ್ತೂರಿನವರಾಗಿದ್ದು ಪ್ರಸ್ತುತ ಆಮೇರಿಕಾದಲ್ಲಿರುವ ವಿನಾಯಕ ಕುಡ್ವರವರ ಪ್ರಾಯೋಜಕತ್ವದಲ್ಲಿ ವಿವೇಕಾನಂದ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಚೈತ್ರಾ ಎಂಬ ಪ್ರತಿಭಾವಂತ ವಿದ್ಯಾರ್ಥಿನಿಗೆ ರೂ.50 ಸಾವಿರ ಮೊತ್ತದ ವಿದ್ಯಾರ್ಥಿವೇತನವನ್ನು ಹಸ್ತಾಂತರಿಸಲಾಯಿತು. ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಗುರುಪ್ರಸಾದ್ ಬನ್ನೂರುರವರನ್ನು, ಮೂರು ಅಂಗನವಾಡಿಗಳ ಅಭಿವೃದ್ಧಿಯ ನೇತೃತ್ವ ವಹಿಸಿದ ಸದಸ್ಯ ರಾಕೇಶ್ ಶೆಟ್ಟಿಯವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಎಕೆಎಸ್ ಕೆ.ವಿಶ್ವಾಸ್ ಶೆಣೈ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಾಜೆಕ್ಟ್ ನಡಿಯಲ್ಲಿ ಮಳೆ ನೀರು ಕೊಯ್ದು ಯೋಜನೆಯ ಪ್ರಯುಕ್ತ ವೀರಮಂಗಲ ಸರಕಾರಿ ಶಾಲೆಗೆ ಮಳೆ ನೀರನ್ನು ಬಾವಿಗೆ ಮರುಪೂರಣ ಮಾಡುವ ಶುದ್ದೀಕರಣ ಪರಿಕರವನ್ನು ಶಾಲಾ ಮುಖ್ಯ ಶಿಕ್ಷಕ ತಾರಾನಾಥ ಸುವರ್ಣರವರಿಗೆ ಕ್ಲಬ್ ವತಿಯಿಂದ ಹಸ್ತಾಂತರಿಸಲಾಯಿತು.

ಬೇಬಿ ನಿನಾದ ಪ್ರಾರ್ಥಿಸಿದರು. ನಿರ್ಗಮನ ಅಧ್ಯಕ್ಷ ಮೊಹಮದ್ ರಫೀಕ್ ದರ್ಬೆ ಸ್ವಾಗತಿಸಿದರು. ನೂತನ ಕಾರ್ಯದರ್ಶಿ ಡಾ.ರಾಮಚಂದ್ರ ಕೆ. ವಂದಿಸಿದರು. ಸದಸ್ಯರಾದ ಪುರುಷೋತ್ತಮ ಶೆಟ್ಟಿ, ಪದ್ಮನಾಭ ಶೆಟ್ಟಿ, ಕಿರಣ್, ಅಮಿತಾ ಶೆಟ್ಟಿರವರು ಹೂಗುಚ್ಚ ನೀಡಿ ಗೌರವಿಸಿದರು. ನಿರ್ಗಮನ ಕಾರ್ಯದರ್ಶಿ ಚಂದ್ರಹಾಸ ರೈ ಬಿ. ವರದಿ ಮಂಡಿಸಿದರು. ಪದಪ್ರದಾನ ಅಧಿಕಾರಿ, ಅಸಿಸ್ಟೆಂಟ್ ಗವರ್ನರ್, ವಲಯ ಸೇನಾನಿ, ನೂತನ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿಯವರ ಪರಿಚಯವನ್ನು ರಾಕೇಶ್ ಶೆಟ್ಟಿ, ಸಾಹಿರಾ ಝುಬೈರ್, ಜಗನ್ನಾಥ ಅರಿಯಡ್ಕ ಲಾವಣ್ಯ ನಾಯ್ಕ, ನವ್ಯಶ್ರೀ ನಾಯ್ಕ, ಅಶೋಕ್ ನಾಯ್ಕ ರವರು ಮಾಡಿದರು. ಸಾರ್ಜಂಟ್ ಎಟ್ ಆರ್ಮ್ಸ್ ಸಂತೋಷ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅಭಿಜಿತ್ ಕೆ, ಬುಲೆಟಿನ್ ಎಡಿಟರ್ ಸನತ್ ಕುಮಾರ್ ರೈ, ಕ್ಲಬ್ ಸರ್ವಿಸ್ ನಿರ್ದೇಶಕ ಜಯಪ್ರಕಾಶ್ ಅಮೈ, ವೊಕೇಶನಲ್ ಸರ್ವಿಸ್ ನಿರ್ದೇಶಕ ಚಿದಾನಂದ ರೈ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕಿ ನವ್ಯಶ್ರೀ ನಾಯ್ಕ, ಯೂತ್ ಸರ್ವಿಸ್ ನಿರ್ದೇಶಕ ಪ್ರದೀಪ್ ಪೂಜಾರಿ, ಅಂತರ್ ರಾಷ್ಟ್ರೀಯ ಸರ್ವಿಸ್ ನಿರ್ದೇಶಕ ರಾಕೇಶ್ ಶೆಟ್ಟಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸದಸ್ಯೆ ಭಾರತಿ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top