ನಾಥಪಂಥ ಬೇರೆಯಲ್ಲ, ಭಾರತ ಪಂಥ ಬೇರೆಯಲ್ಲ: ಡಾ. ಬಿ. ವಿ ವಸಂತಕುಮಾರ್ | ವಿವೇಕಾನಂದ ಮಹಾವಿದ್ಯಾಲದಲ್ಲಿ ಡಾ. ಶ್ರೀಧರ್ ಹೆಚ್ ಜಿ ಕೃತಿ ’ನಾಥಪಂಥ’ ಲೋಕಾರ್ಪಣೆ

ಪುತ್ತೂರು : ನಾಥಪಂಥ ಕೃತಿ ವ್ಯಷ್ಟಿಯ ಮೂಲಕ ಹೊರಬಂದಿರುವ ಸಮಷ್ಟಿ. ಆತ್ಮಹತ್ಯೆಯೇ ಮುಂದಿನ ದಾರಿ, ಬೇರೆ ಯಾವುದೇ ದಾರಿ ಇಲ್ಲ ಎನ್ನುವ ವ್ಯಕ್ತಿಯ ಮನಸ್ಸನ್ನು ಆತ್ಮ ಮತ್ತು ವಿಕಾಸದೆಡೆಗೆ ಕೊಂಡೊಯ್ಯಲು ನಾಥಪಂಥ ಸಹಾಯವಾಗುತ್ತದೆ. ಜೀವನದ ಪ್ರತಿ ಹಂತದಲ್ಲೂ ಈ ಕೃತಿಯ ಪಾತ್ರ ಪಹತ್ವವಾದದ್ದು, ಅಂತೆಯೇ ಪಂಥಗಳ ಕುರಿತು ಅಧ್ಯಯನ ಮಾಡುವವರಿಗೆ ಈ ಪುಸ್ತಕ ಮಾದರಿಯಾಗಲಿದೆ ಎಂದು ಮೈಸೂರು ಮಹಾರಾಣಿ ಕಲಾ ಕಾಲೇಜಿನ ಪ್ರಾಚಾರ್ಯ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ. ಬಿ. ವಿ ವಸಂತಕುಮಾರ್ ಹೇಳಿದರು.

ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ), ಕನ್ನಡ ವಿಭಾಗ, ಕನ್ನಡ ಸಂಘ, ವಿವೇಕಾನಂದ ಸಂಶೋಧನಾ ಕೇಂದ್ರ ಮತ್ತು ಆಂತರಿಕ ಗುಣಮಟ್ಟ ಮತ್ತು ಭರವಸೆ ಘಟಕ ಇದರ ಸಹಯೋಗದಲ್ಲಿ ನಡೆದ ಡಾ. ಶ್ರೀಧರ ಎಚ್. ಜಿ ರಚನೆಯ ’ನಾಥಪಂಥ’ ಕೃತಿ ಲೋಕಾರ್ಪಣೆಗೈದು ಮಾತನಾಡಿದರು.

ಬದುಕಿನಲ್ಲಿ ಸಂತೋಷವನ್ನು ಕಾಣಲು ಇಂತಹ ಪುಸ್ತಕಗಳನ್ನು ಓದಬೇಕು. ಎಲ್ಲರಲ್ಲೂ ಒಂದು ಶಕ್ತಿ ಇರುತ್ತದೆ. ಆ ಶಕ್ತಿಯ ಮೇಲೆ ನಂಬಿಕೆ ಇಡುವುದರ ಮೂಲಕ ಇದನ್ನು ಸಾಕಾರಗೊಳಿಸಿಕೊಳ್ಳಬೇಕು. ನೋವು, ಕ?ದಿಂದ ಹೊರಬರುವುದಕ್ಕಿರುವ ದಾರಿಯೇ ನಾಥಪಂಥ. ಪ್ರೀತಿ ಮತ್ತು ಪ್ರಜ್ಞೆ ಒಂದೇ ನಾಣ್ಯದ ಎರಡು ಮುಖ ಇದ್ದಂತೆ. ಇವೆರಡನ್ನೂ ಈ ಪುಸ್ತಕ ತಿಳಿಸಿಕೊಡುತ್ತದೆ ಎಂದು ಹೇಳಿದರು.































 
 

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಥಪಂಥ ಒಂದು ಸಂಶೋಧನಾ ಗ್ರಂಥ. ಇದು ಇತಿಹಾಸದ ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡುತ್ತದೆ. ಇಂತಹ ಪುಸ್ತಕಗಳು ಸಂಸ್ಕೃತಿಯನ್ನು ತಿಳಿಸುವುದರಜೊತೆಗೆ ಮುಂದಿನ ಪೀಳಿಗೆಗೆ ಉಳಿಸಲು ಸಹಕಾರಿಯಾಗಲಿದೆ. ಹೊಸ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಜೊತೆಗೆ ನಿರಾತಂಕವಾಗಿ ರೂಪಿಸಿಕೊಳ್ಳಲು ಪುಸ್ತಕವನ್ನು ಓದಬೇಕೆ ಹೊರತು ಪರೀಕ್ಷೆಯ ದೃಷ್ಟಿಯಿಂದಲ್ಲ ಎಂದರು.

ಎಸ್. ಡಿ.ಎಂ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಪುಸ್ತಕದ ಬಗ್ಗೆ ಮಾತನಾಡಿ, ಪರಂಪರೆಯನ್ನು ಮುಂದುವರೆಸುವ ಮಹತ್ವದ ಕೃತಿ ಹಾಗೂ ಹಿಂದೂ ಧರ್ಮದ ಕವಲುಗಳನ್ನು ಶೋಧ ಮಾಡುವ ಕೃತಿಯೇ ನಾಥಪಂಥ. ವಚನಕಾರರನ್ನು ಅರ್ಥಮಾಡಿಕೊಳ್ಳಲು ಈ ಕೃತಿ ಸಹಾಯಕವಾಗುತ್ತದೆ. ಇಂತಹ ಪುಸ್ತಕಗಳನ್ನು ಬರೆಯಲು ಸಂತನಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. 

 ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳೀಕೃಷ್ಣ  ಕೆ ಎನ್ ಶುಭಾಶಯ ನುಡಿಗಳನ್ನಾಡಿದರು. ಕೃತಿಯ ಲೇಖಕ, ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪರೀಕ್ಷಾಂಗ ಕುಲಸಚಿವ ಡಾ. ಶ್ರೀಧರ್ ಎಚ್. ಜಿ ಪ್ರಸ್ತಾವಿಕ ಮಾತುಗಳನ್ನಾಡಿದರು.  ಕಾರ್ಯಕ್ರಮವನ್ನು ಕಾಲೇಜಿನ ಪ್ರಾಚಾರ್ಯ ಪ್ರೊ. ವಿಷ್ಣುಗಣಪತಿ ಭಟ್ ಸ್ವಾಗತಿಸಿ, ಐ ಕ್ಯೂಎ ಸಿ ಘಟಕದ ಸಂಯೋಜಕ ಶಿವಪ್ರಸಾದ್. ಕೆ. ಎಸ್ ವಂದಿಸಿದರು. ಉಪನ್ಯಾಸಕಿ ಗೀತಾ ಕುಮಾರಿ ಟಿ. ಕಾರ್ಯಕ್ರಮವನ್ನು ನಿರೂಪಿಸಿದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top