ಬಪ್ಪಳಿಗೆ ಗೆಳೆಯರ ಬಳಗ-ಮೆಸ್ಕಾಂ ಸಿಬ್ಬಂದಿಗಳಿಂದ ಸ್ವಚ್ಛತಾ ಕಾರ್ಯ

ಪುತ್ತೂರು: ಬಪ್ಪಳಿಗೆ ಗೆಳೆಯರ ಬಳಗ ಹಾಗೂ ಮೆಸ್ಕಾ ಸಿಬ್ಬಂದಿ ವರ್ಗದ ವತಿಯಿಂದ ‘ನಮ್ಮ ಊರು ನಮ್ಮ‌ರಕ್ಷಣೆ’ ಧ್ಯೇಯದಡಿ ನಗರದ ಬಪ್ಪಳಿಗೆಯಿಂದ ಬಲ್ನಾಡುವರೆಗೆ ರಸ್ತೆ ಬದಿ ಇರುವ ಅಪಾಯಕಾರಿ ಮರದ ಕೊಂಬೆ ಹಾಗೂ ರಸ್ತೆ ಬದಿಯನ್ನು ಸ್ವಚ್ಛ ಮಾಡುವ ಕಾರ್ಯಕ್ರಮ ನಡೆಯಿತು.

ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ರಸ್ತೆ ಬದಿಗಳಲ್ಲಿ ಹಲವಾರು ಅಪಾಯಕಾರಿ ಮರಗಳು ಇರುತ್ತವೆ.‌ ಕೆಲವೊಮ್ಮೆ ಆ ಮರದ ಕೊಂಬೆಗಳು ಮಳೆಯ ಸಂದರ್ಭ ಅಪಾಯವನ್ನ ತಂದೊಡ್ಡುತ್ತವೆ. ಹೀಗಿರುವಾಗ ಅದನ್ನ ತೆರವುಗೊಳಿಸುವ ಕೆಲಸ ನಗರಸಭೆಯದ್ದಾಗಿದೆ. ಆದ್ರೆ ಇಲ್ಲಿ ಗೆಳೆಯರ ಬಳಗದ ತಂಡದವರು  ನಗರಸಭೆ ಹಾಗೂ ಮೆಸ್ಕಾಂ ಸಿಬ್ಬಂದಿಗಳನ್ನ ಸೇರಿಸಿಕೊಂಡು ಇಂತಹ ಒಂದು ಉತ್ತಮ ಕಾರ್ಯಕ್ಕೆ ಕೈಹಾಕಿರುವುದು ಮೆಚ್ಚುವಂತದ್ದು ಎಂದರು.

ಸಾಮಾಜಿಕ ಮುಂದಾಳು ರಝಾಕ್ ಬಿ.ಎಚ್, ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಮೆಸ್ಕಾಂ ಅಧಿಕಾರಿಗೆ ಗೆಳೆಯರ ಬಳಗದ ವತಿಯಿಂದ ಸನ್ಮಾನ ಮಾಡಲಾಯಿತು. ಈ ಸಂದರ್ಭದಲ್ಲಿ ಗೆಳೆಯರ ಬಳಗದ ಮೋನು ಬಪ್ಪಳಿಗೆ ರಝಾಕ್ ಬಿ.ಎಚ್, ರಮೀಝ್ ಬಪ್ಪಳಿಗೆ, ಶರೀಫ್ ಬಪ್ಪಳಿಗೆ, ಅಮನ್ ಬಪ್ಪಳಿಗೆ, ಉರೈಸ್ ಬಪ್ಪಳಿಗೆ, ಉಮ್ಮರ್ ಬಪ್ಪಳಿಗೆ, ಹುಸೈನ್ ಬಪ್ಪಳಿಗೆ, ಮಸೂದ್ ಬಪ್ಪಳಿಗೆ, ಹರೀಶ್ ಬಪ್ಪಳಿಗೆ, ಸುಭಾಷ್, ಅದ್ದು ಪಡೀಲ್, ಸಜಾಬ್ ಬಪ್ಪಳಿಗೆ, ಅಬ್ಬಾಸ್ ಬಪ್ಪಳಿಗೆ, ಅಲ್ತಾಫ್ ಎಸ್. ಕೆ…ಮೆಸ್ಕಾಂ ಸಿಬ್ಬಂದಿಗಳು, ನಗರಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top