ವಿಧಾನಸೌಧದಲ್ಲಿ ನಮಾಜ್ ಮಾಡಲು ಅವಕಾಶ ನೀಡಿದರೆ ಕರ್ನಾಟಕ ಹೊತ್ತಿ ಉರಿಯುತ್ತೆ : ಪ್ರಮೋದ್ ಮುತಾಲಿಕ್

ಧಾರವಾಡ: ವಿಧಾನಸೌಧದಲ್ಲಿ ನಮಾಜ್ ಮಾಡಲು ಅನುಮತಿ ನೀಡಿದರೆ ಕರ್ನಾಟಕ ಹೊತ್ತಿ ಉರಿಯಲಿದೆ. ಒಂದೆ ವೇಳೆ ಅವಕಾಶ ನೀಡಿದರೆ ನಾವು ವಿಧಾನಸೌಧದಲ್ಲಿ ಹನುಮಾನ್ ಚಾಲಿಸಾ ಪಠ ಮಾಡುತ್ತೇವೆ.

ಹೀಗೆಂದು ರಾಜ್ಯ ಸರಕಾರದ ಮೇಲೆ ಗುಡುಗಿದ್ದಾರೆ ಶ್ರೀ ರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್.

ಅವರು ಧಾರವಾಡದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಹಿಂದೂ ವಿರೋಧಿ ಸರ್ಕಾರ ಎಂದು ಆಕ್ರೋಶ ಹೊರಹಾಕಿದರು. ಯಾವುದೇ ಕಾರಣಕ್ಕೂ ವಿಧಾನಸೌಧದಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಬಾರದು. ಹೀಗಾದರೆ, ದೊಡ್ಡ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಇಲ್ಲಿಯವರೆಗೆ ದೇಶವನ್ನು ಹೇಗೆಲ್ಲಾ ನುಂಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ವಿಧಾನಸೌಧವೇನು ಮಕ್ಕಾ ಮದೀನಾದಲ್ಲಿರುವ ಮಸೀದಿ ಅಲ್ಲ. ಅಲ್ಲಿ ಒಬ್ಬೊಬ್ಬರೋ ಒಂದೊಂದು ಕೇಳುತ್ತಾರೆ. ಒಂದುವೇಳೆ ಸರ್ಕಾರ ಏನಾದರೂ ವಿಧಾನಸೌಧದಲ್ಲಿ ನಮಾಜ್‌ ಮಾಡಲು ಅವಕಾಶ ಕಲ್ಪಿಸಿದ್ರೆ, ನಾವು ಪ್ರತಿದಿನ ಹನುಮಾನ್‌ ಚಾಲಿಸಾ ಪಠಣ ಮಾಡುತ್ತೇವೆ ಎಂದು ಎಚ್ಚರಿಸಿದ್ರು.



































 
 

ಕುರುಬರಹಳ್ಳಿಯಲ್ಲಿ ಗೋ ಶಾಲೆ ತೆರೆಯಲು ಜಾಗ ನೀಡಲಾಗಿತ್ತು. ಆದರೀಗ, ಕಾಂಗ್ರೆಸ್ ಸರ್ಕಾರ ಅದನ್ನು ತಡೆಹಿಡಿದಿದೆ. ಗೋ ರಕ್ಷಣೆಯ ಉದ್ದೇಶದಿಂದ ಅಂದಿನ ಬಿಜೆಪಿ ಸರ್ಕಾರದಿಂದ ಜಮೀನು ಪಡೆಯಲಾಗಿತ್ತು. ಯಾವುದೇ ಲಾಭಕ್ಕಾಗಿ ಪಡೆದುಕೊಂಡಿದ್ದಲ್ಲ. ಈಗಿನ ಸರ್ಕಾರದಲ್ಲಿ ಪೂಜೆ ಮಾಡಲು ಸಹ ಅನುಮತಿ ಕೇಳುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.

ಇನ್ನು ಮೈಸೂರಿನ ಟಿ. ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಹತ್ಯೆ ಸಂಬಂಧ ಮಾತನಾಡಿದ ಮುತಾಲಿಕ್, ದಲಿತ ಹಿಂದೂ ಯುವಕ ಬೆಳೆಯುತ್ತಾನೆ ಎಂಬ ಕಾರಣಕ್ಕೆ ಅವನನ್ನು ಹತ್ಯೆ ಮಾಡಲಾಗಿದೆ. ಹಿಂದೂ ವಿರೋಧಿ ಅನ್ನೋದು ಕಾಂಗ್ರೆಸ್‌ನ ರಕ್ತದ ಕಣಕಣದಲ್ಲೂ ಇದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top