ಪುತ್ತೂರು: ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ಪಡ್ನೂರು ಗ್ರಾಮದಲ್ಲಿ ಗ್ರಾಮ ವಿಕಾಸದ ಗ್ರಾಮಸ್ಥರನ್ನು ಸೇರಿಸಿಕೊಂಡು ದೈವಸ್ಥಾನ ಹಾಗೂ ಔಷಧಿ ವನದಲ್ಲಿ ಔಷಧೀಯ ಗಿಡಗಳನ್ನು ನೆಡಲಾಯಿತು.
ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ವಿವೇಕಾನಂದ ವಿದ್ಯಾವರ್ಧಕ ಸಂಘದ ಈ ವರ್ಷದ ಕಾರ್ಯಕ್ರಮ ವಿವೇಕಸಂಜೀವಿನಿಯ ಅಡಿಯಲ್ಲಿ ಪಡ್ನೂರು ಗ್ರಾಮದಲ್ಲಿ ಗ್ರಾಮ ವಿಕಾಸದ ಗ್ರಾಮಸ್ಥರನ್ನು ಸೇರಿಸಿಕೊಂಡು ಔಷಧೀಯ ಗಿಡಗಳನ್ನು ರುದ್ರಾಕ್ಷಿ ನೇತ್ರಾಂಡಿ ದೈವಸ್ಥಾನದ ಸುತ್ತಲೂ ಮತ್ತು ಪಡ್ನೂರಿನ ಔಷಧಿ ವನದಲ್ಲೂ ನೆಡಲಾಯಿತು.
ಪಾಲಿಟೆಕ್ನಿಕ್ ಆಡಳಿತ ಮಂಡಳಿಯ ಸಂಚಾಲಕ ಮಹಾದೇವ ಶಾಸ್ತ್ರಿ, ಸದಸ್ಯ ರವಿ ಮುಂಗ್ಲಿಮನೆ, ವಿದ್ಯಾವರ್ಧಕ ಸಂಘದ ನಿರ್ದೇಶಕ ಅಚ್ಯುತ ಪ್ರಭು, ಪ್ರಾಚಾರ್ಯ ಚಂದ್ರಕುಮಾರ್, ಸಿವಿಲ್ ವಿಭಾಗದ ಮುಖ್ಯಸ್ಥ ರವಿರಾಮ ಸಿದ್ಧಮೂಲೆ, ಉಪನ್ಯಾಸಕರು, ಗ್ರಾಮಸ್ಥರಾದ ಆನಂದ ಗೌಡ ಮೂವಪ್ಪು, ರಾಮಣ್ಣ ಗೌಡ, ಕುಶಾಲಪ್ಪ ಮತ್ತಿತರರು ಭಾಗವಹಿಸಿದ್ದರು. ಉಪನ್ಯಾಸಕ ವಿನ್ಯಾಸ ಕಾರ್ಯಕ್ರಮದ ವ್ಯವಸ್ಥೆ ಮಾಡಿದರು.