ಪುತ್ತೂರು: ವೈದ್ಯಕೀಯ ಸೇವೆಯಿಂದ ವಿಶ್ರಾಂತ ಪಡೆದ ಕಂಪೌಂಡ್ ಎಂದೇ ಹೆಸರು ಪಡೆದ ನರಸಿಂಹ ಭಟ್ ರನ್ನು ಪುತ್ತೂರು ಭಾರತೀಯ ಜನತಾ ಪಾರ್ಟಿ ವತಿಯಿಂದ ಸನ್ಮಾನಿಸಲಾಯಿತು.

ಬಿಜೆಪಿ ಮುಖಂಡರು ನರಸಿಂಹ ಭಟ್ ಅವರ ಮನೆಗೆ ತೆರಳಿ ದಂಪತಿಯನ್ನು ಸನ್ಮಾನಿಸಿ ಅವರ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ಹಿರಿಯ ಮುಖಂಡರಾದ ಅಪ್ಪಯ್ಯ ಮಣಿಯಾಣಿ, ಜೀವಂಧರ್ ಜೈನ್, ರಾಜೇಶ್ ಬನ್ನೂರು, ಜಗನ್ನಿವಾಸ ರಾವ್, ರಾಮದಾಸ್ ಹಾರಾಡಿ, ಯುವರಾಜ್ ಪೆರಿಯತ್ತೋಡಿ, ಜಯಶ್ರೀ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.