ಬೆಂಗಳೂರು : ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ. ಅಣ್ಣಾಮಲೈ ಅವರು ನಡೆಸಲಿರುವ 120 ದಿನಗಳ ಕಾಲ ಪಾದಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜು. 8 ರಂದು ರಾಮೇಶ್ವರಂನಿಂದ ಚಾಲನೆ ನೀಡಲಿದ್ದಾರೆ.
ಎನ್ ಮಣ್ ಎನ್ ಮಕ್ಕಳ್ – ಪ್ರಥಮರ್ ಮೋದಿಯಿನ್ ತಮಿಳ್ ಮುಝಕ್ಕಂ (ನನ್ನ ಭೂಮಿ, ನನ್ನ ಜನರು – ತಮಿಳರಿಗೆ ಪ್ರಧಾನಿ ಮೋದಿಯವರ ಕರೆ) ಎಂಬ ಹೆಸರಿನ ಈ ಯಾತ್ರೆಯು ಎಲ್ಲಾ 234 ವಿಧಾನಸಭಾ ಕ್ಷೇತ್ರಗಳನ್ನು ಹಾದುಹೋಗಲಿದ್ದು, 2024 ರ ಜನವರಿ ಮಧ್ಯದಲ್ಲಿ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಚೆನ್ನೈನಲ್ಲಿ ಕೊನೆಗೊಳ್ಳಲಿದೆ.
ಅಣ್ಣಾಮಲೈ ಅವರು ಆ.7 ರಂದು ಮಧುರೈನಲ್ಲಿ ಬಿಜೆಪಿ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 50 ನೇ ದಿನದ ಪಾದಯಾತ್ರೆ ಪರಮತಿ ವೆಲ್ಲೂರಿನಲ್ಲಿ ಮತ್ತು 100 ನೇ ದಿನದ ಪಾದಯಾತ್ರೆ ವಂದವಾಸಿ ಮತ್ತು ಉತ್ತರಮೇರೂರಿನಲ್ಲಿ ನಡೆಯಲಿದೆ. ಉದ್ಘಾಟನಾ ದಿನದಂದು ಸುಮಾರು ಒಂದೂವರೆ ಲಕ್ಷ ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಪಾದಯಾತ್ರೆಯಲ್ಲಿ ಸುಮಾರು 5 ಸಾವಿರ ಜನರು ಭಾಗವಹಿಸುತ್ತಾರೆ. ಈ ರೋಡ್‌ಶೋ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆ ಎಂದು ತಮಿಳುನಾಡು ಬಿಜೆಪಿಯ ಉಪಾಧ್ಯಕ್ಷ ನಾರಾಯಣನ್ ತಿರುಪತಿ ಮಾಧ್ಯಮದವರಿಗೆ ತಿಳಿಸಿದ್ದಾರೆ.