ಜಾಗದ ವಿಚಾರದಲ್ಲಿ ನೆರೆಮನೆಯ ನಾಲ್ವರಿಂದ ಹಲ್ಲೆ

ಕಡಬ: ಜಾಗದ ವಿಚಾರಕ್ಕೆ ಸಂಬಂಧಿಸಿ ಪಕ್ಕದ ಮನೆಯವರ ಮೇಲೆ ಹಲ್ಲೆ ಮಾಡಿದ ಘಟನೆ ಕಡಬ ಠಾಣಾ ವ್ಯಾಪ್ತಿಯ ಕಲ್ಲುಗುಡ್ಡೆಯಲ್ಲಿ ನಡೆದಿದೆ.

ಆರ್ಲ ನಿವಾಸಿ, ಸೈನಿಕ ಅಝೀಝ್‍, ಪತ್ನಿ ಫೌಝಿಯಾ ಹಾಗೂ ಮಗ ಮತ್ತು ಇನ್ನೋರ್ವರು ಹಲ್ಲೆಗೊಳಗಾದವರು

ಕಲ್ಲುಗುಡ್ಡೆಯಲ್ಲಿರುವ ತಂದೆ ಮನೆಗೆ ಫೌಝಿಯಾ ಹೋಗಿದ್ದರು. ಈ ಸಂದರ್ಭದಲ್ಲಿ ನೆರೆಮನೆಯ ನಾಲ್ವರು ಜಾಗದ ವಿಚಾರದಲ್ಲಿ ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಫೌಝಿಯಾ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಫೌಝಿಯಾ ಅವರ ತಂದೆ ಮೇಲೂ ಹಲ್ಲೆ ನಡೆದಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳು ಕಡಬ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top