ಪುತ್ತೂರು: ಭೂದಾಖಲೆ ಸಹಿತ ಹಲವು ವಿಷಯಗಳಿಗೆ ಸಂಬಂಧಿಸಿ ನಿರಾಪೇಕ್ಷಣಾ ಪತ್ರದ ನಕಲಿ ದಾಖಲೆ ಸೃಷ್ಟಿಸಿ ಮಾಡಿರುವ ಆರೋಪಕ್ಕೆ ಸಂಬಂಧಿಸಿ ಪುತ್ತೂರಿನ ಪಡೀಲ್‍ನಲ್ಲಿರುವ ಕಚೇರಿಯೊಂದಕ್ಕೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದಾರೆ.

ವಿಶ್ವನಾಥ್ ಎಂಬವರಿಗೆ ಸೇರಿದ ಇಲೆಕ್ಟ್ರಿಕಲ್ಸ್ ಮತ್ತು ಪ್ಲಂಬಿಗ್ ವರ್ಕ್ ಕಚೇರಿಗೆ ದಾಳಿ ನಡೆಸಿದ್ದು, ಪುತ್ತೂರು ಹಾಗೂ ಕಡಬದ ಎಲ್ಲಾ ಗ್ರಾಪಂ ಮೊಹರು, ಬಂಟ್ವಾಳ ತಾಲೂಕಿನ ಮೂರು ಗ್ರಾಪಂಗಳ ಪಿಡಿಒ ಸೀಲ್, ನಗರಸಭೆ ಅಧಿಕಾರಿಗಳ ಮೊಹರು ಎಲ್ಲವನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ನೇತೃತ್ವದ ತಂಡ ಈ ದಾಳಿ ನಡೆಸಿದೆ.