ಮಂಗಳೂರು: ಸಾಮಾಜಿಕ ಮೌಲ್ಯಗಳನ್ನು ಬಾಲ್ಯದಲ್ಲೇ ಬೆಳೆಸಿಕೊಳ್ಳಬೇಕು. ಪರಿವರ್ತನೆಯ ಹಾದಿ ನಿರಂತರವಾಗಿ ಬದಲಾವಣೆ ಪರ್ವವನ್ನು ಕಾಣುತ್ತದೆ. ಪ್ರತಿ ಚಿಂತನೆಗಳು ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವುದು ನಮ್ಮ ಕರ್ತವ್ಯವಾಗಿದೆ ಎಂದು ಬಿಜಿಎಸ್ ಕಾವೂರು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ತಿಳಿಸಿದರು.
ಸಂಸ್ಥೆಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸದ್ಗುಣಗಳನ್ನು ರೂಢಿಸಿಕೊಳ್ಳಬೇಕು. ಶಿಸ್ತುಬದ್ಧ ಜೀವನ ಇದ್ದರೆ ಬಹುರೂಪಿಯಾಗಿ ಬೆಳೆಯಬಹುದಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಪೊಲೀಸ್ ಅಧೀಕ್ಷಕ ಲೋಕಾಯುಕ್ತ ಚೆಲುವರಾಜು ಬೆಂಗಳೂರು, ಬಿಜಿಎಸ್ ಎಜ್ಯುಕೇಶನ್ ಸೆಂಟರ್ ನ ಪ್ರಾಂಶುಪಾಲೆ ರೇಶ್ಮಾ ಸಿ ನಾಯರ್, ಬಿಜಿಎಸ್ ಸಂಸ್ಥೆಯ ವ್ಯವಸ್ಥಾಪಕ ಸುಬ್ಬಕಾರಡ್ಕ, ಬಿಜಿಎಸ್ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ, ಮುಖ್ಯ ಶಿಕ್ಷಕಿ ಪ್ರಿಯಾ ಬಂಗೇರ ಉಪಸ್ಥಿತರಿದ್ದರು. ಶಿಕ್ಷಕಿ ಭಾಗ್ಯ ಲಕ್ಷ್ಮೀ ಸ್ವಾಗತಿಸಿದರು. ಶಿಕ್ಷಕಿ ನಿವೇದಿತಾ ವಂದಿಸಿದರೆ ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.