ಪುತ್ತೂರು: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪರ್ವತ ಅಶ್ರಮದ ಕಾಮಕುಮಾರ ನಂದಿ ಮಹಾರಾಜ ಮುನಿಗಳನ್ನು ಹತ್ಯೆ ಮಾಡಿದ ಕೃತ್ಯ ಅತ್ಯಂತ ಖಂಡನೀಯ ಮತ್ತು ಅಮಾನವೀಯತೆಯಿಂದ ಕೂಡಿದ್ದು, ಕೊಲೆ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪುತ್ತೂರು ಶಾಸಕ ಅಶೋಕ್ ರೈ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಸರಕಾರ ಈಗಾಗಲೇ ಈ ಕೊಲೆ ಕೃತ್ಯದ ತನಿಖೆಗೆ ಆದೇಶಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ.
ಸದಾ ಶಾಂತಿಯನ್ನೇ ಬಯಸುವ ಮತ್ತು ಸಮಾಜದಲ್ಲಿ ಸೋಧರತೆಯ , ಸೌಹಾರ್ಧತೆಯ ಪ್ರತಿಬಿಂಬವಾಗಿರುವ ಜೈನ ಮುನಿಗಳ ಹತ್ಯೆಯನ್ನು ಸಮಾಜ ಸಹಿಸುವುದಿಲ್ಲ. ಶಾಂತಿಪ್ರಿಯ ಸಮುದಾಯದ ಮುನಿಗಳ ಹತ್ಯೆ ಕೃತ್ಯ ಘೋರವಾಗಿದೆ. ತಪ್ಪಿತಸ್ಥರ ವಿರುದ್ದ ಕಠಿಣ ಕಾನೂನುಕ್ರಮಕೈಗೊಳ್ಳುವ ಮೂಲಕ ಮೃತ ಮುನಿಗಳ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡಬೇಕಿದೆ ಎಂದು ಶಾಸಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.