ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ  ಮೋಹನ್ ಆಳ್ವ ಭೇಟಿ

ಪುತ್ತೂರು: ಸರಳತೆಯ ಸಾಕಾರ ಮೂರ್ತಿ ಸಾಹಿತ್ಯ ಮತ್ತು ಕಲಾಪೋಷಕರಾದ ಮೋಹನ್ ಆಳ್ವ ಅವರು  ಪುತ್ತೂರು  ಕನ್ನಡ ಸಾಹಿತ್ಯ ಪರಿಷತ್ ಕಚೇರಿಗೆ ಭೇಟಿ ನೀಡಿದರು.

ರೋಟರಿ ಕ್ಲಬ್ ಪುತ್ತೂರು ಪದಗ್ರಹಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಅವರು ವಿನಂತಿಯ ಮೇರೆಗೆ ತಡರಾತ್ರಿ 10:30 ಆದರೂ ಕನ್ನಡ ಹಾಗೂ ಸಾಹಿತ್ಯ ಪರಿಷತ್ ಮೇಲಿನ ಅಭಿಮಾನದಿಂದ ಕಚೇರಿಗೆ ಆಗಮಿಸಿ ಪುತ್ತೂರು ತಾಲೂಕು  ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಕುರಿತು ಪ್ರಶಂಶಿಸಿದರು  ಜೊತೆಗೆ ಕನ್ನಡ ಶಾಲೆಗಳ ಅಭಿವೃದ್ಧಿಯ  ಕುರಿತು ಒಂದಿಷ್ಟು ಯೋಚನೆಗಳನ್ನು ನೀಡಿದರು.  ಮುಂದಿನ ದಿನಗಳಲ್ಲಿ ಪುತ್ತೂರಿಗೆ ಆಗಮಿಸಿ  ಈ ಕುರಿತು ವಿಸ್ಕೃತ  ಮಾತುಕತೆ ನಡೆಸುವ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮೋಹನ್ ಆಳ್ವ ಅವರಿಗೆ ಕನ್ನಡ ಪೇಟ ಹಾಗೂ ಶಾಲು ಪುಸ್ತಕವನ್ನು ನೀಡಿ ಗೌರವಿಸಿದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top