ಕೊಂಬೆಟ್ಟು ಪ್ರೌಡ ಶಾಲೆ ಕಟ್ಟಡ ಪಕ್ಕ ಮತ್ತೆ ಮಣ್ಣು ಕುಸಿತ | ಅಧಿಕಾರಿಗಳಿಂದ ಪರಿಶೀಲನೆ

ಪುತ್ತೂರು: ಭಾರೀ ಮಳೆಯ ಪರಿಣಾಮ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ದಕ್ಷಿಣ ಪಾರ್ಶ್ವದಲ್ಲಿರುವ ತಾಲೂಕು ಕ್ರೀಡಾಂಗಣದ ಬಳಿಯ ಮಣ್ಣಿನ ದಿಣ್ಣೆ ಕುಸಿತ ಉಂಟಾಗಿದೆ. ಇದರಿಂದಾಗಿ ದಿಣ್ಣೆಯ ಮೇಲಿರುವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳ ನೂತನ ಶೌಚಾಲಯ ಕಟ್ಟಡಕ್ಕೆ ಅಪಾಯ ಎದುರಾಗಿದೆ.

ತಾಲೂಕು ಕ್ರೀಡಾಂಗಣದ ಮೈದಾನದ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಮಣ್ಣು ಅಗೆದ ಪರಿಣಾಮವಾಗಿ ಈ ಭಾಗದಲ್ಲಿ ಪದೇ ಪದೇ ಮಣ್ಣು ಕುಸಿತ ಆಗುತ್ತಿದೆ. ಮಣ್ಣು ಕುಸಿತದಿಂದಾಗಿ ಈಗಾಗಲೇ ಶಾಲೆಯ ಬೆಳ್ಳಿಹಬ್ಬದ ಸಂದರ್ಭದಲ್ಲಿ ನಿರ್ಮಾಣಗೊಂಡ ಕಟ್ಟಡ ಬಿರುಕು ಬಿಟ್ಟಿದ್ದು ಅದನ್ನು ತೆರವು ಮಾಡಲು ಲೋಕೋಪಯೋಗಿ ಇಲಾಖೆ ಅದೇಶ ನೀಡಿತ್ತು.  

ಇದೀಗ ಕ್ರೀಡಾಂಗಣದ ದಕ್ಷಿಣ ಭಾಗದಲ್ಲಿ ಭಾರೀ ಮಳೆಗೆ ಮತ್ತೆ ಮಣ್ಣು ಕುಸಿತವಾಗಿದ್ದು, ದಿಣ್ಣೆ ಕುಸಿತದಿಂದಾಗಿ ಹಳೆಯ ಶೌಚಾಲಯದ ಅಡಿಗಲ್ಲು  ಕಾಣುವಂತಾಗಿದೆ. ಇದರ ಪಕ್ಕದಲ್ಲಿರುವ ಕಳೆದ ಶೈಕ್ಷಣಿಕ ವರ್ಷದಲ್ಲಿ ಹಿಂದಿನ ಶಾಸಕ ಸಂಜೀವ ಮಠಂದೂರು ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಪುರುಷರ ಶೌಚಾಲಯ ಕಟ್ಟಡಕ್ಕೆ ಅಪಾಯ ಉಂಟಾಗಿದೆ.



































 
 

ಸ್ಥಳಕ್ಕೆ ಸ್ಥಳೀಯ ನಗರಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಬಿರಾವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top